ಉಡುಪಿ, ಮೇ 06 (Daijiworld News/MB) : ನನಗೆ ವಿದೇಶದಿಂದ ಬರುವ ಕರೆಗಳ ಬಗ್ಗೆ ತನಿಖೆ ಆಗಬೇಕು, ಈಗಾಗಲೇ ನಾನು ಈ ಕುರಿತಾಗಿ ದೂರು ನೀಡಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಅವರ ಬಳಿಯಲ್ಲೂ ಮಾತನಾಡಿದ್ದೇನೆ. ಇಂಟರ್ನೆಟ್ ಮೂಲಕ ಬೆದರಿಕೆ ಕರೆಗಳು ಸುಮಾರು 2 ವರ್ಷಗಳಿಂದ ಬರುತ್ತಿದೆ. ಅಣ್ಣಾಮಲೈ ಎಸ್ಪಿ ಆಗಿದ್ದ ಸಂದರ್ಭದಲ್ಲಿ ಅವರಲ್ಲಿಯೂ ಈ ಬಗ್ಗೆ ದೂರು ನೀಡಿದ್ದೆ. ಆ ಸಂದರ್ಭದಲ್ಲಿ ನಾನು ಪಿಎಫ್ಐ ವಿರುದ್ಧ ಹಾಗೂ ಹಿಂದೂ ಹುಡುಗರ ಹತ್ಯೆಯಾದ ಸಂದರ್ಭದಲ್ಲಿ ಮಾತಾಡಿದ್ದೆ ಎಂದು ಆರೋಪಿಸಿದ್ದಾರೆ.
ಎಸ್ಪಿಡಿಐ ವಿರುದ್ಧವಾಗಿ ಮಾತಾಡಿದ ಸಂದರ್ಭದಲ್ಲಿ ಕರೆಗಳು ಬರುತ್ತದೆ. ಇತ್ತೀಚೆಗೆ ತಬ್ಲೀಗ್ ಕುರಿತಾಗಿ ಮಾತಾಡಿದ್ದ ಬಳಿಕ ಈ ರೀತಿ ಬೆದರಿಕೆ ಕರೆಗಳು ಆರಂಭವಾಗಿದೆ. ದಿನಕ್ಕೆ ೨೦ ರಿಂದ ೨೫ ಕರೆಗಳು ಬರುತ್ತದೆ. ಇದು ಕೇರಳದ ಯುವಕನಿಗೆ ಕುವೈಟ್ನಲ್ಲಿ ಕಪಾಳ ಮೋಕ್ಷ ಮಾಡಿದ್ದರ ಬಗ್ಗೆ ನಾನು ಮಾತಾನಾಡಿದ ಬಳಿಕ ಈ ಕರೆಗಳು ಹೆಚ್ಚಾಗಿದೆ. ಆ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.
ನನಗೆ ಪೊಲೀಸರ ಭದ್ರತೆ ಬೇಡ, ನಮ್ಮ ಕಾರ್ಯಕರ್ತರೇ ನನಗೆ ಭದ್ರತೆ. ನನ್ನ ಗನ್ ಮ್ಯಾನ್ ಆಗಿದ್ದವರನ್ನು ಕೂಡಾ ನಾನು ವಾಪಾಸ್ ಕಳಿಸಿದ್ದೇನೆ ಎಂದು ಹೇಳಿದ್ದಾರೆ.