ಮಂಗಳೂರು, ಮೇ 06 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಬುಧವಾರದಂದು ಜಿಲ್ಲೆಯ ಜನತೆಗೆ ನಿರಾಳರಾಗುವ ಸುದ್ದಿಯೊಂದು ಲಭಿಸಿದ್ದು, ಜಿಲ್ಲೆಯಲ್ಲಿ ಓರ್ವ ಸೋಂಕಿತ ವ್ಯಕ್ತಿ ಬಿಡುಗಡೆಗೊಂಡಿದ್ದಾರೆ.
ರೋಗಿ ಸಂಖ್ಯೆ 325 ಗುಣಮುಖರಾದವರು. ಗುಣಮುಖರಾದವರು ಉಪ್ಪಿನಂಗಡಿ ನಿವಾಸಿಯಾಗಿದ್ದಾರೆ. ಏಪ್ರಿಲ್ 17ರಂದು ಇವರಲ್ಲಿ ಸೋಂಕು ಕಂಡುಬಂದಿತ್ತು. ತಕ್ಷ್ಣಣ ಮಂಗಳೂರಿನ ಕೊರೊನಾ ಚಿಕಿತ್ಸಾ ಆಸ್ಪತ್ರೆ ವೆನ್ಲಾಕ್ ನ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿರಂತರ 20 ದಿನಗಳ ಚಿಕಿತ್ಸೆಯ ಬಳಿಕ ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಇನ್ನು ಇವರು, ಮಾರ್ಚ್ 28ರಂದು ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭ ಅವರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.