ಕಾಸರಗೋಡು, ಮೇ 06 (DaijiworldNews/SM): ಕರ್ನಾಟಕದಿಂದ ಗಡಿ ಮೂಲಕ ಕಾಸರಗೋಡು ಜಿಲ್ಲೆಗೆ ತೆರಳುವವರಿಗೆ ಕೇರಳ-ಕರ್ನಾಟಕ ಸರಕಾರಗಳ ಪಾಸ್ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಉಭಯ ರಾಜ್ಯಗಳ ಪಾಸ್ ಇಲ್ಲದವರನ್ನು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಕರ್ನಾಟಕದ ಪಾಸ್ ಗಾಗಿ https://sevasindhu.karnataka.gov.in/Sevasindhu/English ಎಂಬ ಲಿಂಕ್ ಹಾಗೂ ಕೇರಳದ ಪಾಸ್ ಗಾಗಿ covid19jagratha.nic.in ಎಂಬ ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇತರ ಹೊರ ರಾಜ್ಯಗಳಿಂದ ಆಗಮಿಸುವವರು ಇವರನ್ನು ಕರೆದುಕೊಂಡು ಹೋಗಲು ತಲಪಾಡಿ ಗಡಿಗೆ ತಲಪುವವರು, covid19jagratha.nic.in ಎಂಬ ವೆಬ್ ಸೈಟ್ ಮೂಲಕ ನೋಂದಣಿ ಮಾಡಬೇಕು. ಕ್ವಾರಂಟೈನ್ ಸಲಹೆಗಳನ್ನು ಕಡ್ಡಾಯವಾಗಿ ಇವರು ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ರೆಡ್ ಝೋನ್ ನಿಂದ ಆಗಮಿಸುವವವರು ಸರಕಾರದ ನಿಗಾ ಕೇಂದ್ರದಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಮಾತ್ರ ಅವರಿಗೆ ಮನೆಗೆ ತೆರಳಲು ಅವಕಾಶ ನೀಡಲಾಗುವುದು. ಸರಕಾರದ ನಿಗಾ ಕೇಂದ್ರದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಹಾಟ್ ಸ್ಪಾಟ್ ಗಳಿಲ್ಲದ ಸ್ಥಳಗಳಲ್ಲಿ ಖಾಸಗಿ ಕಚೇರಿಗಳು ತೆರೆಯಬಹುದು. ಆದರೆ, ಸರಕಾರದ ನಿಬಂಧನೆ ಪಾಲನೆ ಕಡ್ಡಾಯವಾಗಿದೆ. ೫೦ ಶೇಕಡದಷ್ಟು ನೌಕರರು ಮಾತ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಇದ್ದು, ಆದಿತ್ಯವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಕಾರ್ಯಾಚರಿಸಬಹುದು. ಸಿಬ್ಬಂದಿಗಳು ಕಡ್ಡಾಯವಾಗಿ ಸಂಸ್ಥೆಯ ಗುರುತು ಚೀಟಿ ಹೊಂದಿರಬೇಕು.