ಮೂಡುಬಿದಿರೆ, ಮೇ 7 (Daijiworld News/MSP): ಮೂಡುಬಿದಿರೆಯ ವೈದ್ಯಕೀಯ ಸಿಬ್ಬಂದಿಯೂ, ಇರುವೈಲ್ ನ ಮಹಿಳೆಯ ಹೆರಿಗೆಗೆಂದು ಬಂದಿದ್ದಾಗ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಕ್ಕೆ ಸ್ಪಂದಿಸಿದ ಶಾಸಕ ಉಮಾನಾಥ್ ಕೋಟ್ಯಾನ್ ಬುಧವಾರ ಮಧ್ಯಾಹ್ನ ಆರೋಗ್ಯಕ್ಕೆ ಕೇಂದ್ರಕ್ಕೆ ಬಂದು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡು ಎಚ್ಚರಿಕೆ ನೀಡಿದ್ದಾರೆ.
"ನೀವೂ ಕೂಡ ತಾಯಂದಿರು ಅಲ್ಲವೇ,? ನಿಮ್ಮ ಹಾಗೆ ನನಗೂ ಕೂಡ ಒಬ್ಬ ಮಗಳಿದ್ದಾಳೆ, ಹೆರಿಗೆಗೆಂದು ಬಂದ ಸಂದರ್ಭ ಈ ರೀತಿ ನಿರ್ಲಕ್ಷ್ಯಿಸುವುದು ಎಷ್ಟು ಸರಿ, ನೀವೇ ತಪ್ಪು ಮಾಡಿದರೆ ಹೇಗೆ? ಎಂದು ಎಚ್ಚರಿಕೆ ಶಾಸಕರು ನೀಡಿದ್ದಾರೆ.
ಇರುವೈಲ್ ನ ಮಹಿಳೆಯ ಹೆರಿಗೆಗೆಂದು ಏ.30 ರಂದು ಬಂದಾಗ ಸಿಬ್ಬಂದಿಗಳು ಸರಿಯಾದ ವೈದ್ಯಕೀಯ ಉಪಚಾರ ನೀಡಿರಲಿಲ್ಲ. ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಮಂಗಳೂರಿಗೆ ಕರೆದೊಯ್ಯಲು ಹೇಳಿದ್ದು, ಆಂಬ್ಯುಲೆನ್ಸ್ ಬರುವಷ್ಟರಲ್ಲಿ ತನಗೆ ಹೆರಿಗೆಯಾಗಿತ್ತು. ಈ ಸಂದರ್ಭ ಆಸ್ಪತ್ರೆಯ ಪರಿಚಾರಕ ವರ್ಗದವರೇ ನನ್ನನ್ನು ನೋಡಿಕೊಂಡಿದ್ದು ಹೊರತು, ನರ್ಸ್ ಗಳಾಗಿ ವೈದ್ಯರಾಗಲಿ ಬಂದಿಲ್ಲ ಎಂದು ಆರೋಪಿಸಿದ್ದರು.
ಈ ಆರೋಪ ನಿರಾಕರಿಸಿರುವ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ, "ಮಹಿಳೆಗೆ ಆರೋಗ್ಯ ಉಪಚಾರ ನೀಡಿದ್ದೆವು. ಆದರೆ ತಡ ರಾತ್ರಿ ಆಕೆಗೆ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಒಯ್ಯಲು ಸೂಚಿಸಿದ್ದೆವು. ಆಂಬ್ಯುಲೆನ್ಸ್ ಸಿದ್ದವಾಗುವ ವೇಳೆ ನಾರ್ಮಲ್ ಹೆರಿಗೆಯಾದ ಕಾರಣ ಇಲ್ಲೇ ಶುಶ್ರೂಷೆ ನೀಡಲಾಗಿದೆ. ಆಕೆ ಕ್ಷೇಮವಾಗಿದ್ದಾರೆ" ಎಂದು ಅವರು ತಿಳಿಸಿದ್ದಾರೆ.