ಮಂಗಳೂರು, ಮೇ 07 (DaijiworldNews/SM): ಗುರುವಾರದಂದು ಲಭ್ಯವಾದ ಎಲ್ಲಾ 92 ವರದಿ ನೆಗೆಟಿವ್ ಆಗುವ ಮೂಲಕ ಜಿಲ್ಲೆಯ ಜನತೆಯ ಆತಂಕ ದೂರವಂತಾಗಿದೆ. ಒಂದೊಮ್ಮೆ ಒಂದು ಪಾಸಿಟಿವ್ ಬಂದ್ರು ಕೂಡ ರೆಡ್ ಝೋನ್ ಭಿತಿಯಲ್ಲಿತ್ತು. ಆದರೆ, ಇಂದಿನ ವರದಿ ನೆಗೆಟಿವ್ ಆಗುವ ಮೂಲಕ ಜನತೆ ನಿರಾಳರಾಗಿದ್ದಾರೆ.
272 ಸ್ಯಾಂಪಲ್ ಗಳ ವರದಿಯನ್ನು ನಿರೀಕ್ಷಿಸಲಾಗಿದೆ. ಇನ್ನು ಬುಧವಾರದಂದು 3 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಇದೀಗ ಜನತೆ ನಿರಾಳರಾಗಿದ್ದಾರೆ. ಗುರುವಾರ ಲಭ್ಯವಾದ ಎಲ್ಲಾ ವರದಿಗಳು ನೆಗೆಟಿವ್ ಆಗುವ ಮೂಲಕ ಜನರ ಆತಂಕ ದೂರವಾದಂತಾಗಿದೆ.
2569 ಮಂದಿ ಇಲ್ಲಿಯ ತನಕ ಫಿವರ್ ಸೆಂಟರ್ ಗಳಲ್ಲಿ ಪರೀಕ್ಷೆ ನಡೆಸಿದ್ದಾರೆ. ಗುರುವಾರದಂದು 147 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ.