ಕಾಸರಗೋಡು, ಮೇ 09 (DaijiworldNews/SM): ಜಿಲ್ಲೆಯಲ್ಲಿ ಸೇರಿದಂತೆ ಕೇರಳದಲ್ಲಿ ಆದಿತ್ಯವಾರ ಸಂಪೂರ್ಣ ಲಾಕ್ ಡೌನ್ ಗೆ ತೀರ್ಮಾನಿಸಲಾಗಿದೆ. ಮೇ 10 ಮತ್ತು 17 ರ ರವಿವಾರಗಳಂದು ಸಂಪೂರ್ಣ ಲಾಕ್ ಡೌನ್ ಆಗಲಿದ್ದು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಲಿವೆ. ವಾಹನ ಸಂಚಾರವೂ ಕೂಡ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸರಕಾರದ ಈ ನಿರ್ಧಾರಕ್ಕೆ ಜನ ಸಹಕರಿಸುವಂತೆ ರಾಜ್ಯ ಸರಕಾರ ಮನವಿ ಮಾಡಿದೆ.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ನಿಯಂತ್ರಣದಲ್ಲಿದೆ. ಶನಿವಾರ 28 ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ. ಆದರೆ, ಯಾವುದೇ ಕೊರೊನಾ ಪಾಸಿಟಿವ್ ದೃಢಪಟ್ಟಿಲ್ಲ. 989 ಮಂದಿ ಈಗಾಗಲೇ ನಿಗಾದಲ್ಲಿದ್ದು, ಈ ಪೈಕಿ 93 ಮಂದಿಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ. ಓರ್ವ ಮಾತ್ರ ಕೊರೊನಾ ಸೋಕಿತ ಚಿಕಿತ್ಸೆಯಲ್ಲಿದ್ದು, ಉಳಿದವರು ಗುಣಮುಖರಾಗಿದ್ದಾರೆ .
ತಲಪಾಡಿ ಗಡಿ ಮೂಲಕ ಶನಿವಾರ 362 ಮಂದಿ ಕೇರಳೀಯರು ತಲಪಿದ್ದಾರೆ. ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದವರು ತಲಪಿದ್ದು, ಪಾಸ್ ಮೂಲಕ ಇವರಿಗೆ ಕೇರಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆನ್ ಲೈನ್ ಮೂಲಕ ನೋಂದಣಿ ನಡೆಸಿ ಪಾಸ್ ಪಡೆದವರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ ಇದುವರೆಗೆ 4017 ಮಂದಿ ಕೇರಳಕ್ಕೆ ತಲಪಿದ್ದಾರೆ. ಕಾಸರಗೋಡು ಜಿಲ್ಲೆಯವರನ್ನು ಸೂಕ್ತ ದಾಖಲೆ ಪಡೆದುಕೊಂಡು ತಪಾಸಣೆ ನಡೆಸಿ ಜಿಲ್ಲೆಗೆ ತೆರಳಲು ಅನುಮತಿ ನೀಡಲಾಯಿತು.