ಮಂಗಳೂರು, ಮಾ 15: ನಗರದ ತೊಕ್ಕೊಟ್ಟು ಟಿ.ಸಿ ರಸ್ತೆಯಲ್ಲಿರುವ ಮಂಗಳೂರು ಇನ್ ಸ್ಟ್ರಿಟ್ಯೂಟ್ ಆಫ್ ಟೆಕ್ನಲಾಜಿಕಲ್ ಸೈನ್ಸ್ ಹೆಸರಿನ ರಸ್ತೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾದುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಳ್ಳಾಲದ ಗೋಡ್ವಿನ್ ಡಿಸೋಜಾ ಎಂದು ಗುರುತಿಸಲಾಗಿದೆ.ಈತ ಈ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ರೂ. 10,000 ರಿಂದ 45,000 ಹಣಕ್ಕೆ ಮಾರಾಟ ಮಾಡಿ ವಂಚಿಸುತ್ತಿದ್ದ.
ಈತನು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತನು ಈ ಸಂಸ್ಥೆಯನ್ನು ನಡೆಸುತ್ತಿದ್ದು
ಈತನು 2016 ನೇ ಇಸವಿಯಿಂದ ಸಂಸ್ಥೆಯನ್ನು ನಡೆಸುತ್ತಲೇ ಎಸ್ಎಸ್ಎಲ್ ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಾ ರೂ. 10,000 ರೂಪಾಯಿಂದ ದಿಂದ ರೂ. 45,000 ರೂಪಾಯಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದನು.
ಈ ಸಂಸ್ಥೆಯ ಪ್ರಿನ್ಸಿಪಾಲ್ ಅಸ್ಕಾರ್ ಶೇಖ್, ಡೈರೆಕ್ಟರ್ ಅಸ್ಕಾನ್ ಶೇಖ್ ಹಾಗೂ ಗೋಡ್ವಿನ್ ಡಿ ಸೋಜಾ ಜೊತೆಯಾಗಿ ಸೇರಿ ಈ ಸಂಸ್ಥೆಗೆ ನಕಲಿ ಅಂಕಪಟ್ಟಿಗಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಮಾಹಿತಿಯನ್ನು ಪಡೆದು ಒಂದು ವಾರದ ಒಳಗಡೆ ಅವರಿಗೆ ಬೇಕಾದ ಡಿಗ್ರಿಗಳ ಅಂಕಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದನು.
ಈ ಸಂಸ್ಥೆಯಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಕಲಿ ಸರ್ಟಿಫಿಕೇಟ್ ಗೆ ರೂ. 10,000/- ಮತ್ತು ಡಿಗ್ರಿ ಹಾಗೂ ಡಿಪ್ಲೋಮಾ ಸರ್ಟಿಫಿಕೇಟ್ ಗೆ ರೂ. 45,000/- ದರವನ್ನು ನಿಗದಿಪಡಿಸಿ ಹಣವನ್ನು ಪಡೆದುಕೊಳ್ಳುತ್ತಿದ್ದನು.
ಆರೋಪಿಗಳು ಮಂಗಳೂರು ಪಬ್ಲಿಕ್ ಸ್ಕೂಲ್ ಎಂಬ ಶಿಕ್ಷಣ ಸಂಸ್ಥೆ ಎಂಬ ನಕಲಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗವನ್ನು ಮಾಡಿರುತ್ತಾರೆ ಎಂಬುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಈ ಮೂಲಕ ಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕ ಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದರು.
ಈ ಸಂಸ್ಥೆಯಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ ಹಲವು ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಶಿಕ್ಷಣ ಸಂಸ್ಥೆಯಿಂದ ನೀಡಿದೆನ್ನಲಾದ ನಕಲಿ ಸರ್ಟಿಫಿಕೇಟ್ ಗಳು, ಲ್ಯಾಪ್ ಟಾಪ್, 3 ನಕಲಿ ಸೀಲುಗಳು, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪ್ರಿಂಟರ್, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪೇಪರ್, ಐಫೋನ್ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.