ಮಂಗಳೂರು, ಮೇ 10 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ತಮ್ಮ ಊರುಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರನ್ನು ಭಾನುವಾರ ತಮ್ಮ ಊರುಗಳಿಗೆ ರೈಲಿನ ಮೂಲಕ ಕರೆದೊಯ್ಯಲಾಗಿದೆ.
ಉತ್ತರ ಭಾರತ ಹಾಗೂ ಬಿಹಾರಕ್ಕೆ ತಲಾ ಒಂದೊಂದು ರೈಲುಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯಲಾಗಿದ್ದು ಎರಡು ರೈಲಿನಲ್ಲಿ 1140 ವಲಸೆ ಕಾರ್ಮಿಕರು ಇದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಇಂದು ಬೆಳಿಗ್ಗೆ ಒಂದು ರೈಲು ಹೊರಟಿದ್ದು ಸಂಜೆ ಮಗದೊಂದು ರೈಲು ಪ್ರಯಾಣ ಆರಂಭಿಸಲಿದೆ.
ಪಾಸ್ ಇದ್ದ ವಲಸೆ ಕಾರ್ಮಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು ಪ್ರಯಾಣಕ್ಕೂ ಮೊದಲು ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಳಿಕ ಅವರ ಕ್ಯಾಂಪ್ಗಳಿಂದ 23 ಕೆಎಸ್ಆರ್ಟಿಸಿ ಬಸ್ಸುಗಳ ಮೂಲಕ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಪ್ರತೀ ಬಸ್ಸಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನೇಮಿಸಿ, ಅವರಿಗೆ ಒಬ್ಬರು ಗ್ರಾಮಕರಣಿಕರು ಹಾಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು.