ಮಂಗಳೂರು, ಮೇ 10 (DaijiworldNews/SM): ಹೊರರಾಜ್ಯದಲ್ಲಿರುವ ಜಿಲ್ಲೆಯ ಜನತೆ ಮರಳಿ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಹೊರರಾಜ್ಯದಿಂದ ಆಗಮಿಸುವವರಿಗೆ ಸೇವಾಸಿಂಧೂ ಪಾಸ್ ಖಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚೆಕ್ಪೋಸ್ಟ್ ಮೂಲಕ ಮಾತ್ರ ಬರಲು ಅವಕಾಶವಿದೆ. ಹೊರರಾಜ್ಯದಿಂದ ಬರುವ ಎಲ್ಲರಿಗೂ ಕ್ವಾರಂಟೈನ್ ಖಡ್ಡಾಯವಿದೆ. ಚೆಕ್ಪೋಸ್ಟ್ ಹೊರತು ಅನ್ಯ ಮಾರ್ಗದಲ್ಲಿ ಒಳನುಸುಳಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನು ತಪಾಸಣೆ ನಡೆಸುವುದು. ಹಾಗೂ ಅವರನ್ನು ಕ್ರಮ ಪ್ರಕಾರವಾಗಿಯೇ ಕಳುಹಿಸುವುದು. ಹಾಗೂ ಅವರ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಅಗತ್ಯವಾಗಿದೆ. ಕಾರ್ಮಿಕರು ಕೂಡ ಕಡ್ಡಾಯವಾಗಿಯೇ ಈ ಆಪ್ ಮೂಲಕ ನೋಂದಣಿ ನಡೆಸುವ ಅಗತ್ಯತೆ ಇದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ.