ಮಂಗಳೂರು, ಮೇ 12(Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಮುಂಬೈಯಲ್ಲಿ ಸಮಸ್ಯೆಗೀಡಾದ, ಮಂಗಳೂರು, ಉಡುಪಿ ಮೂಲದ ಸುಮಾರು 20 ಮಂದಿ ಮೊದಲನೇ ಹಂತದಲ್ಲಿ ವಿಶೇಷ ಬಸ್ ಮೂಲಕ ಸೋಮವಾರ ಮುಂಬೈಯ ಬೊರಿವಲಿಯಿಂದ ಕರಾವಳಿಗೆ ಪ್ರಯಾಣ ಬೆಳೆಸಿಲಿದ್ದಾರೆ.
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಒಪ್ಪಿಗೆ ಮೇರೆಗೆ ಈ ಬಸ್ಸು ಸೋಮವಾರದಂದು ಮಧ್ಯಾಹ್ನ ಹೊರಟಿದ್ದು ಮಂಗಳವಾರ ಬೆಳಗ್ಗೆ ಉಡುಪಿಗೆ ತಲುಪಲಿದೆ. ಆ ಬಳಿಕ ಮಂಗಳೂರಿಗೆ ಆಗಮಿಸಲಿದೆ ಮುಂಬೈಯಿಂದ ಬಸ್ಸಿನಲ್ಲಿ ಆಗಮಿಸುವ ಪ್ರತಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮಾತ್ರವಲ್ಲದೆ
ಎಲ್ಲರೂಈ ಪಾಸ್ ಹೊಂದಿದ್ದಾರೆ. ಎರಡನೇ ಹಂತದ ಬಸ್ ಮಂಗಳವಾರ ಮುಂಬೈಯಿಂದ ಹೊರಡುವ ನಿರೀಕ್ಷೆ ಇದೆ ಎಂದು ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ವೇಳೆ ಮುಂಬೈ ಸಂಸದ ಗೋಪಾಲ ಶೆಟ್ಟಿ, ಮುಂಡಪ್ಪ ಪಯ್ಯಾದೆ, ಮಂಜುನಾಥ ಬನ್ನೂರು , ಪ್ರಕಾಶ್ ಶೆಟ್ಟಿ ಮತ್ತಿತರರು ಇದ್ದರು