ಮಂಗಳೂರು, ಮೇ 12 (DaijiworldNews/SM): ವಿದ್ಯುತ್ ಬಿಲ್ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಆಡಳಿತನಿರ್ದೇಶಕ ಸ್ನೇಹಲ್ ಸ್ಪಷ್ಟನೆ ನೀಡಿದ್ದಾರೆ. ಜೂನ್ ಅಂತ್ಯದ ತನಕ ಬಿಲ್ ಪಾವತಿಸದಿದ್ದಲ್ಲಿ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಲ್ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಗ್ರಾಹಕರಿಗೆ ಅನಗತ್ಯ ತೊಂದರೆ ನೀಡಬಾರದು. ಸರಕಾರದ ಆದೇಶದಂತೆ ಜೂನ್ ಅಂತ್ಯದ ತನಕ ವಿನಾಯಿತಿ ನೀಡಲಾಗಿದೆ.
ಜೂನ್ ಅಂತ್ಯದ ತನಕ ಅವಕಾಶ ನೀಡಲಾಗಿದೆ. ಅಲ್ಲಿಯ ತನಕ ಬಿಲ್ ಪಾವತಿಸದವರಿಂದ ಹೆಚ್ಚುವರಿಯಾಗಿ ಯಾವುದೇ ಹಣ ವಸೂಲಿ ಮಾಡುವುದಿಲ್ಲ. ಹಾಗೂ ಯಾವುದೇ ದಂಡವನ್ನು ಕೂಡ ವಿಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.