ಮಂಗಳೂರು, ಮೇ 13 (Daijiworld News/MB) : ಕೊರೊನಾದಿಂದಾಗಿ ದುಬೈಯಲ್ಲಿ ಸಂಕಷ್ಟಕ್ಕೀಡಾದ ಕರಾವಳಿಗರನ್ನು ಹೊತ್ತು ಹೊರಟ ಮೊದಲ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಬಂದಿಳಿದಿದೆ. ಈ ಸಂದರ್ಭದಲ್ಲಿ ಏರ್ಇಂಡಿಯಾ ವಿಮಾನದ ಪೈಲೆಟ್ ಪ್ರಯಾಣಿಕರಿಗೆ ಕನ್ನಡದಲ್ಲಿ ಮಾಹಿತಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಮೊದಲು ಇಂಗ್ಲೀಷ್ನಲ್ಲಿ ಮಾಹಿತಿ ನೀಡಿದ ಅವರು ಬಳಿಕ ಕನ್ನಡದಲ್ಲೂ ಮಾಹಿತಿ ನೀಡಿದ್ದು "ಪ್ರೀತಿಯ ಸಹೋದರ ಸಹೋದರಿಯರೇ ನಿಮ್ಮಗೆಲ್ಲರಿಗೂ ನಮಸ್ಕಾರ, ನನ್ನ ಕನ್ನಡದಲ್ಲಿ ತಪ್ಪಿದ್ದರೆ ಕ್ಷಮಿಸಿ" ಎಂದು ಹೇಳಿದ್ದಾರೆ.
"ನನಗೆ ಹಾಗೂ ನನ್ನ ತಂಡಕ್ಕೆ ಭಾರತ ಸರ್ಕಾರ ಯೋಜಿಸಿರುವ ವಂದೇ ಭಾರತ್ ಮಿಷನ್ನಲ್ಲಿ ಕಾರ್ಯ ನಿರ್ವಹಿಸಲು ಹೆಮ್ಮೆಯಾಗಿದೆ. ನಮ್ಮೆಲ್ಲರ ಸುರಕ್ಷತೆಗಾಗಿ ಇಲ್ಲಿಯ ಸಿಬ್ಬಂದಿಯೊಂದಿಗೆ ಹಾಗೂ ಮಂಗಳೂರು ತಲುಪಿದ ಬಳಿಕ ಅಲ್ಲಿಯ ಸಿಬ್ಬಂದಿಗಳೊಂದಿಗೆ ಸಹಕರಿಸಿ" ಎಂದು ಮನವಿ ಮಾಡಿದ್ದಾರೆ.
ಮಂಗಳವಾರ ದುಬೈನಿಂದ 38 ಗರ್ಭಿಣಿಯರು ಸಹಿತ 177 ಮಂದಿ ಕರಾವಳಿಗರು ಮಂಗಳೂರಿಗೆ ಆಗಮಿಸಿದ್ದಾರೆ.