ಮಂಗಳೂರು, ಮೇ 13 (Daijiworld News/MB) : ಮಂಗಳವಾರವಷ್ಟೇ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಡುಪಿ ಮೂಲದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು ಬುಧವಾರ ಮತ್ತೆ ಫಸ್ಟ್ ನ್ಯೂರೋ ಸಂಪರ್ಕದಿಂದ ಉಳ್ಳಾಲದ ಸೋಮೇಶ್ವರದ ದಾರಂದಬಾಗಿಲು ಪ್ರದೇಶದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ.
ಮಹಿಳೆಗೆ ಫಸ್ಟ್ನ್ಯೂರೋ ಸಂಪರ್ಕದಿಂದ ಸೋಂಕು ತಗುಲಿದ್ದ ರೋಗಿ ಸಂಖ್ಯೆ ಪಿ-507 ಸಂಪರ್ಕದಿಂದ ಸೋಂಕು ತಗುಲಿದ್ದು ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ರವಾನಿಸಲಾಗಿದೆ.
ಫಸ್ಟ್ನ್ಯೂರೋದಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ಧೆ ಮತ್ತು ಸೊಸೆ ಕೊರೊನಾದಿಂದಾಗಿ ಮೃತಪಟ್ಟ ಬಳಿಕ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿತ್ತು. ಇದೀಗ ಇಂದು ಸೋಂಕು ದೃಢಪಟ್ಟ ಮಹಿಳೆಯ ಊರಾದ ಸೋಮೇಶ್ವರದ ದಾರಂದಬಾಗಿಲು ಪ್ರದೇಶವನ್ನೂ ಸೀಲ್ಡೌನ್ ಮಾಡುವ ತಯಾರಿ ನಡೆಯುತ್ತಿದೆ.
ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದೆ.