ಉಳ್ಳಾಲ, ಮೇ 13 (DaijiworldNews/SM): ಸೋಮೇಶ್ವರದ ಪಿಲಾರು ನಿವಾಸಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪಿಲಾರ್ ವ್ಯಾಪ್ತಿಯಲ್ಲಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಕಂಟೈನ್ ಮೆಂಟ್ ವ್ಯಾಪ್ತಿಯಲ್ಲಿ 95 ಮನೆಗಳು ಮತ್ತು 10 ವಾಣಿಜ್ಯ ಮಳಿಗೆಗಳು ಕಂಟೈನ್ ಮೆಂಟ್ ವ್ಯಾಪ್ತಿಗೆ ಒಳಪಟ್ಟಿವೆ. ಕಂಟೈನ್ ಮೆಂಟ್ ಝೋನ್ ಸಂಪೂರ್ಣ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪೂರ್ವದಿಂದ ಅಭಿ ಜನರಲ್ ಸ್ಟೋರ್, ಪಶ್ಚಿಮದಿಂದ ಪಿಲಾರ್ ಮಸೀದಿ, ಉತ್ತರ ಪಂಜದಾಯ ದೈವಸ್ಥಾನ, ದಕ್ಷಿಣ ನಿತ್ಯಾಧರ್ ಚರ್ಚ್ ಕಂಟೈನ್ ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಉಳಿದಂತೆ 5 ಕಿ.ಮೀ. ವ್ಯಾಪ್ತಿ ಸಂಪೂರ್ಣ ಬಫರ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಈ ಪ್ರದೇಶದಲ್ಲಿ 21,390 ಮನೆಗಳಿವೆ. 5,211 ಅಂಗಡಿ ಮುಂಗಟ್ಟುಗಳು ಹಾಗೂ ಕಚೇರಿಗಳಿವೆ. ಇನ್ನು ಈ ಪ್ರದೇಶದಲ್ಲಿ 1,03,098 ಜನ ವಾಸಿಸುತ್ತಿದ್ದಾರೆ.