ಮಂಗಳೂರು, ಮೇ 13 (DaijiworldNews/SM): ದ.ಕ. ಜಿಲ್ಲೆಯ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದು ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದ್ದ ಪಾಣೆಮಂಗಳೂರು ಮೂಲದ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ರೋಗಿ ಸಂಖ್ಯೆ 501 ಪಾಣೆಮಂಗಳೂರಿನ ಮಹಿಳೆಯಲ್ಲಿ ಏಪ್ರಿಲ್ 26ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಅವರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದರು. ಬಂಟ್ವಾಳದಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದ ಮಹಿಳೆಯಿಂದ ಸೋಂಕು ಹರಡಿದೆ. ಇದೀಗ ಆ ಮಹಿಳೆ ಗುಣಮುಖರಾಗಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬುಧವಾರದಂದು 148 ಮಂದಿಯ ವರದಿ ಲಭ್ಯವಾಗಿದ್ದು, ಒಬ್ಬರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಉಳಿದಂತೆ 147ಯ ವರದಿ ನೆಗೆಟಿವ್ ಬಂದಿದೆ. ಇನ್ನು ಬುಧವಾರದಂದು ಚಿಕಿತ್ಸೆ ಫಲಕಾರಿಯಾಗದೆ ಬೋಳಾರ ಮೂಲದ ಸೋಂಕಿತ ಮಹಿಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 14 ಮಂದಿಯನ್ನು ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಲ್ಲಿಯ ತನಕ 3138 ಮಂದಿ ಫಿವರ್ ಕ್ಲೀನಿಕ್ ನಲ್ಲಿ ಇಲ್ಲಿಯ ತನಕ ತಪಾಸಣೆ ನಡೆಸಿದ್ದಾರೆ.