ನವದೆಹಲಿ, ಮಾ 17: ಇಡೀ ಭಾರತ ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಪಕ್ಷದವರು ಸಿಟ್ಟು, ಆಕ್ರೋಶಗಳನ್ನು ಬಳಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಪ್ರೀತಿಯನ್ನು ಬಯಸುತ್ತಿದ್ದೇವೆ. ಭಾರತ ದೇಶವಿಂದು ಜಾತಿ, ಧರ್ಮದ ಆಧಾರದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಇಬ್ಭಾಗವಾಗುತ್ತಿದ್ದು ಎಲ್ಲಾ ಗುರುತುಗಳು ಬೆದರಿಕೆಗೆ ಒಳಗಾಗುತ್ತಿವೆ. ನಿಮ್ಮ ಬಳಿ ಇರುವ ಕೈ ಚಿಹ್ನೆಯೇ ನಿಮ್ಮ ಶಕ್ತಿ. ಈ ಚಿಹ್ನೆ ದೇಶವನ್ನು ಒಗ್ಗೂಡಿಸುವುದಲ್ಲದೆ, ಮುಂದಕ್ಕೆ ಒಯ್ಯಲಿದೆ. ಬಿಜೆಪಿ ಪಕ್ಷ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಲು ಅಸಮರ್ಥ ಎಂದು ತಿಳಿಸಿದರು.
ಭಾರತ ದೇಶ ಪ್ರತಿಯೊಬ್ಬರಿಗೂ ಸೇರಿರುವುದಾಗಿದೆ. ಕಾಂಗ್ರೆಸ್ ಪಕ್ಷ ಇಲ್ಲಿ ಏನು ಮಾಡುವುದಿದ್ದರೂ ದೇಶದ ಜನತೆಯ ಒಳಿತಿಗಾಗಿ ಮಾಡುತ್ತಿದೆ. ಇದರಿಂದ ದೇಶಕ್ಕೆ ಒಳಿತಾಗಲಿದೆ. ಹೊಸ ದಿಕ್ಕು ಮತ್ತು ಹೊಸ ದೃಷ್ಟಿಕೋನದತ್ತ ಸಾಗಲು ಇದು ಸರಿಯಾದ ಸಮಯವಾಗಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತು ವಿರೋಧ ಪಕ್ಷಗಳನ್ನು ಸೋಲಿಸಲು ಮಾಡಬೇಕಾದ ಕೆಲಸಗಳತ್ತ ಮಾರ್ಗದರ್ಶಿಯಂತೆ ಬೆಳಕು ಚೆಲ್ಲಲಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.