ಮಂಗಳೂರು, ಮೇ 14 (Daijiworld News/MSP): ದ.ಕ. ಜಿಲ್ಲೆಗೆ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಕರಾಳವಾಗಿ ಪರಿಣಮಿಸಿದೆ. ಇದೇ ಆಸ್ಪತ್ರೆಯ ನಂಟು ಹೊಂದಿ ಕೊರೊನಾ ಪೀಡಿತರಾಗಿದ್ದ ನಾಲ್ವರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಬುಧವಾರ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾಗಿದ್ದು, ಗುರುವಾರವೂ ಕರಾವಳಿಯ ಪಾಲಿಗೆ ಕಹಿಯಾಗಿ ಪರಿಣಮಿಸಿದ್ದು, ಕೊರೊನಾ ಸೋಂಕಿನಿಂದ ಕೋವಿಡ್ ಆಸ್ಪತ್ರೆಯಲ್ಲಿರುವ ಕುಲಶೇಖರದ 80ರ ವೃದ್ಧೆಯ ಮೃತಪಟ್ಟಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮೃತಪಟ್ಟವರೆಲ್ಲ ಮಹಿಳೆಯರೇ ಆಗಿದ್ದು ಎಲ್ಲರೂ ಫಸ್ಟ್ ನ್ಯೂರೋ ನಂಟು ಹೊಂದಿದ್ದರು ಎನ್ನುವುದು ಆತಂಕಕಾರಿ ವಿಚಾರ. ಕೊರೋನಾ ಸೋಂಕಿನಿಂದ ಕೋವಿಡ್ ಆಸ್ಪತ್ರೆಯಲ್ಲಿದ್ದ ಮೃತಪಟ್ಟ ಕುಲಶೇಖರದ 80ರ ವೃದ್ಧೆಯ ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿದ್ದು ಅವರಿಗೆ ಹಲವು ದಿನಗಳಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣ 34ಕ್ಕೆ ಏರಿಕೆಯಾಗಿದೆ. ಮೃತಪಟ್ಟವರೆಲ್ಲ ಮಹಿಳೆಯರೇ ಆಗಿದ್ದಾರೆ. ಸಕ್ರಿಯ 17 ಪ್ರಕರಣಗಳಿದ್ದು, 14 ಮಂದಿ ಗುಣಮುಖರಾಗಿದ್ದಾರೆ. . 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.