ವಯಸ್ಸು 40 ದಾಟಿತೆಂದರೆ ಬಿಪಿ ಶುಗರ್ ಖಾಯಿಲೆ ಬೆನ್ನುಹತ್ತಿ ಕಾಡಲು ಶುರುಮಾಡುತ್ತೆ, ಇವರಿಗೆಲ್ಲರಿಗೂ ಮಾದರಿ ಕಾರ್ಕಳ ಬೋಳ ಗ್ರಾಮದ ಶತಾಯುಷಿ ಅಜ್ಜಿ. ತಲೆತುಂಬಾ ನರೆತ ಕೂದಲು..ಸುಕ್ಕುಗಟ್ಟಿದ ಚರ್ಮ..ಬಾಗಿ ಹೋದ ಬೆನ್ನು..ಅದರೂ ಜೀವನೋತ್ಸಾಹ ಮಾತ್ರ ಎಳ್ಳಷ್ಟು ಕಮ್ಮಿಯಾಗಿಲ್ಲ. ಯುವಸಮುದಾಯವನ್ನು ನಾಚಿಸುವಂತಿರುವಂತಿರುವ ಈ ಅಜ್ಜಿಯ ವಯಸ್ಸು ಬರೋಬ್ಬರಿ 102 ವರ್ಷ !.
ನೂರು ವರ್ಷವನ್ನು ಸವೆಸಿರುವ ಸಿಸಿಲಿಯಾ ಮಥಾಯಸ್ ಅವರು ಜನಿಸಿದ್ದು 1916ರಲ್ಲಿ. ಇಂದಿಗೂ ತನ್ನೆಲ್ಲಾ ಕೆಲಸಗಳ ಜೊತೆ ಮನೆಯ ಸಣ್ಣ ಪುಟ್ಟ ಕೆಲಸವನ್ನು ಯಾವುದೇ ಸಹಾಯವಿಲ್ಲದೇ ನಿರ್ವಹಿಸುವ ಅಜ್ಜಿ ಇಂದಿಗೂ ಫಿಟ್ ಎಂಡ್ ಫೈನ್. 2 ಗಂಡು,3 ಹೆಣ್ಣು ಮಕ್ಕಳು ಹೀಗೆ ಐವರು ಮಕ್ಕಳ ಮುದ್ದಿನ ತಾಯಿ ಸಿಸಿಲಿಯಾ ಮಥಾಯಸ್.
ಆರೋಗ್ಯದ ಗುಟ್ಟು:
ಶತಾಯುಷಿಯಾದರೂ ಮಾತಿನಲ್ಲಿ ತೊದಲಿಲ್ಲ.. ಮರೆಯೂ ಇನ್ನೂ ಅವರಿಸಿಲ್ಲ.. ವಯಸ್ಸು 102ದರೂ, ವರ್ತನೆ 50-60 ವರ್ಷದ ವ್ಯಕ್ತಿಯಂತೆ. ಮನೆಮಂದಿಯಿಂದ ಗ್ರಾಮದ ಜನತೆಯವರೆಗೆ ಅಜ್ಜಿ ಎಂದರೆ ಅಚ್ಚುಮೆಚ್ಚು. ಇನ್ನು ಇವರ ಆರೋಗ್ಯದ ಗುಟ್ಟಾದರೂ ಏನೂ ಎಂದು ಮನೆಮಂದಿಯನ್ನು ಪ್ರಶ್ನಿಸಿದರೆ..ಅಜ್ಜಿಗೆ ಇಷ್ಟ ರಾಗಿ ಮುದ್ದೆ ಮತ್ತು ಅಕ್ಕಿಯಿಂದ ತಯಾರಿಸಿದ ಆಹಾರ ಎನ್ನುತ್ತಾರೆ.
ಬೋಳ ಗ್ರಾಮದಲ್ಲಿ ತನ್ನ ಮಗ ಲಾರೆನ್ಸ್ ಮಥಾಯಸ್ ಹಾಗೂ ಮಗಳು ಜುಸ್ಥಿನಾ ಮಥಾಯಸ್ ರವರೊಂದಿಗಿದ್ದು ಖುಷಿಯಿಂದ ಜೀವನ ಕಳೆಯುತ್ತಿರುವ,ಇವರು ಇಂದಿಗೂ ತನ್ನ ದಿನನಿತ್ಯದ ಚಟುವಟಿಕೆಗಳಿಗೆ ಯಾರನ್ನೂ ಅವಲಂಬಿಸಿಲ್ಲ. ಎಂದಿನಂತೆ ಮುಂಜಾವಿನಲ್ಲೇ ಎಲ್ಲರಂತೆ ತನ್ನ ನಿತ್ಯ ಕಾರ್ಯದಲ್ಲಿ ತೊಡಗುತ್ತಾರೆ. ಮನೆಯವರಿಗೆ ಹೊರೆಯಾಗದೇ ತನ್ನ ಕೆಲಸವನ್ನು ತಾನೇ ನಿರ್ವಹಿಸಿಕೊಳ್ಳುತ್ತಿರುವ ಈ ಶತಾಯುಷಿ ಅಜ್ಜಿ ಬೋಳ ಗ್ರಾಮದ ಹೆಮ್ಮೆಯ ಅಜ್ಜಿಯಾಗಿದ್ದಾರೆ.