ಮಂಗಳೂರು, ಮೇ 14 (Daijiworld News/MB) : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಿಂದ 2.9 ಕೋಟಿ ರೂ. ದೊರೆತಿದೆ.
ಗೃಹ ಸಚಿವಾಲಯವು ಕೊರೊನಾ ವಿರುದ್ಧದ ಹೋರಾಟಕ್ಕಾಗಿ 84.25 ಕೋಟಿ ರೂಪಾಯಿಯನ್ನು 26 ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದು ಈ ಹಣವನ್ನು ಕ್ವಾರಂಟೈನ್ ವ್ಯವಸ್ಥೆಗೆ, ಮಾದರಿ ಸಂಗ್ರಹಣೆ, ತಪಾಸಣೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಆಹಾರ, ಬಟ್ಟೆ ಮತ್ತು ಪ್ರಯೋಗಾಲಯಗಳಿಗೆ ಉಪಕರಣಗಳಿಗಾಗಿ ವ್ಯಯ ಮಾಡಬಹುದಾಗಿದೆ.
ಬಾಗಲಕೋಟೆಗೆ (2.85 ಕೋಟಿ), ಬಳ್ಳಾರಿ (3.00 ಕೋಟಿ), ಬೆಳಗಾವಿ (4.37 ಕೋಟಿ), ಬೆಂಗಳೂರು ನಗರ (10 ಕೋಟಿ), ಬೆಂಗಳೂರು ಗ್ರಾಮೀಣ (2 ಕೋಟಿ), ಬೀದರ್ (2.5 ಕೋಟಿ), ಚಾಮರಾಜನಗರ (2.74 ಕೋಟಿ), ಚಿಕ್ಕಮಗಳೂರು (3 ಕೋಟಿ), ಯಾದಗಿರಿ (1 ಕೋಟಿ) ಬಿಡುಗಡೆಯಾಗಿದೆ.
ಇನ್ನು ಗದಗಕ್ಕೆ 85 ಲಕ್ಷ, ಹಾಸನಕ್ಕೆ 50 ಲಕ್ಷ, ಕೋಲಾರಕ್ಕೆ 15 ಲಕ್ಷ, ಕೊಪ್ಪಳಕ್ಕೆ 85 ಲಕ್ಷ, ಮಂಡ್ಯಕ್ಕೆ 75ಲಕ್ಷ ಹಾಗೂ ರಾಯಚೂರು ಜಿಲ್ಲೆಗೆ ಲಕ್ಷ 35 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.