ಮಂಗಳೂರು, ಮಾ 17: ಬಿಜೆಪಿ ಪಕ್ಷದವರನ್ನು ಮತಾಂದರು ಎನ್ನುವ ಮೂಲಕ ಕಾಂಗ್ರೆಸ್ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ವಿವಾದ ಸೃಷ್ಠಿಸಿದ್ದಾರೆ.
ಕಾಂಗ್ರೆಸ್ ಚುನಾವಣೆ ಪ್ರಚಾರದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯ ಮತಾಂದರು ದೇಶದಲ್ಲಿ ಯಾವ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆಂದು ನಾವು ಗಮನಿಸಬೇಕು. ಯಾವುದೇ ಕಡೆ ಕೊಲೆಯಾದರೆ ಅವನಿಗೆ ಶಿಕ್ಷೆಯಾಗಬೇಕು, ಗಲ್ಲಾಗಬೇಕು, ಜೈಲಾಗಬೇಕು ಎಂದು ಕುಟುಂಬಸ್ಥರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳಿ ಗಲಭೆಗೆ ಕಾರಣ ಮಾಡುತ್ತಾರೆ. ಆದರೆ, ಕಾಂಗ್ರೆಸ್ ನೇತಾರರು ಮಾತ್ರ ನಮ್ಮ ತಂದೆಯನ್ನು ಕೊಂದವರನ್ನು ನಾವು ಕ್ಷಮಿಸುತ್ತೇವೆ ಎಂದು ಹೇಳಿ ಶಾಂತಿ ಕಾಪಾಡುತ್ತಾರೆ. ಕ್ಷಮಿಸುವ ವರ್ಗ ಹೆಚ್ಚಾದಂತೆ ಗಲಾಟೆ ಇರುವುದಿಲ್ಲ, ಎದುರು ಮಾತನಾಡುವವರಿರುವುದಿಲ್ಲ ಎಂದು ಹೇಳಿದರು.
ಇನ್ನು ಮಾತಿನ ಭರದಲ್ಲಿ ದೊಣ್ಣೆ ಹಿಡಿದುಕೊಂಡು ಮುದುಕ ಎಂದು ಬಾಯಿ ತಪ್ಪಿ ಹೇಳಲು ಹೋಗಿ ಬಳಿಕ ಗಾಂಧಿ ತಾತ ಎಂದು ಹೇಳಿ ಸರಿಪಡಿಸಿಕೊಂಡರು. ಗಾಂಧೀ ತಾತ ಯಾವುದೇ ಆಯುಧಗಳಿಲ್ಲದೇ ಸತ್ಯ, ಅಹಿಂಸೆ, ಅಸತ್ಯ, ಸತ್ಯಾಗ್ರಹಗಳ ಮೂಲಕ ಸ್ವಾತಂತ್ರ್ಯ ಕೊಡಿಸಿ ಪಿತಾಮಹ ಆಗಿದ್ದಾರೆ ಎಂದು ತಿಳಿಸಿದರು.