ಕಾಸರಗೋಡು, ಮೇ 14 (Daijiworld News/MSP): ಕೊರೋನಾ ಹಿನ್ನಲೆಯಲ್ಲಿ ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ನುಸುಳುತ್ತಿರುವವರನ್ನು ತಡೆಗಟ್ಟಲು ಗಡಿಯ ಲ್ಲಿ ಪೊಲೀಸ್ ಕಾವಲು ತೀವ್ರಗೊಳಿಸಲಾಗಿದೆ.
ತಲಪಾಡಿ ಗಡಿ ಅಲ್ಲದೆ ಮಂಜೇಶ್ವರ ಪೊಲೀಸ್ ಠಾಣೆ ಯ 22 , ಆದೂರಿನ 9 , ಬದಿಯಡ್ಕದ ಮೂರು ಕಡೆಗಳಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ ಬಂದಡ್ಕ - ಮಾಣಿಮೂಲೆ , ಪಾಣತ್ತೂರು ಮೊದಲಾದೆಡೆಗಳಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬಂದ ಎಂಟು ಮಂದಿ ವಿರುದ್ಧ ಕಳೆದ ಎರಡು ದಿನಗಳ ಅವಧಿಯಲ್ಲಿ ವಶಕ್ಕೆ ಪಡೆದು , ಸರಕಾರದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ