ಕಾಸರಗೋಡು, ಮೇ 14 (DaijiworldNews/SM): ಕೊರೋನಾ ಹಿನ್ನಲೆಯಲ್ಲಿ ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ನುಸುಳುತ್ತಿರುವವರನ್ನು ತಡೆಗಟ್ಟಲು ಗಡಿಯಲ್ಲಿ ಪೊಲೀಸ್ ಕಾವಲು ತೀವ್ರಗೊಳಿಸಲಾಗಿದೆ.
ತಲಪಾಡಿ ಗಡಿ ಅಲ್ಲದೆ ಮಂಜೇಶ್ವರ ಪೊಲೀಸ್ ಠಾಣೆಯ 22, ಆದೂರಿನ 9, ಬದಿಯಡ್ಕದ ಮೂರು ಕಡೆಗಳಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ ಬಂದಡ್ಕ-ಮಾಣಿಮೂಲೆ, ಪಾಣತ್ತೂರು ಮೊದಲಾದೆಡೆಗಳಲ್ಲಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬಂದ ಎಂಟು ಮಂದಿ ವಿರುದ್ಧ ಕಳೆದ ಎರಡು ದಿನಗಳ ಅವಧಿಯಲ್ಲಿ ವಶಕ್ಕೆ ಪಡೆದು, ಸರಕಾರದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಅತ್ಯಧಿಕ ಕೊರೊನಾ ಸೋಂಕಿತರು ಕಂಡುಬಂದಿದ್ದ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲರೂ ಗುಣಮೂಖರಾಗಿದ್ದರು.