ಮಂಗಳೂರು, ಮಾ 18: ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಗೆ ಮಾರ್ಚ್ 20 ರ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕರಾವಳಿ ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಮೂಡಿಸಿದೆ. ಮಂಗಳವಾರ ಬೆಳಗ್ಗೆ 11.30 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಕಾಪುಗೆ ತೆರಳುತ್ತಾರೆ. ಬಳಿಕ ತೆಂಕ ಎರ್ಮಾಳ್ ನಲ್ಲಿ ರಾಜೀವ್ ಗಾಂಧಿ ಪೊಲಿಟಿಕಲ್ ಇನ್ ಸ್ಟ್ರೀಟ್ಯೂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಪಡುಬಿದ್ರೆಯಲ್ಲಿ ಕಾರ್ನರ್ ಮೀಟಿಂಗ್ ಮುಗಿಸಿ ಮೂಲ್ಕಿಗೆ ಆಗಮಿಸುವರು ಇಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ರಾಹುಲ್ ಅವರಾನ್ನು ಸ್ವಾಗತಿಸುವರು . ಬಳಿಕ ಸುರತ್ಕಲ್ ನಲ್ಲಿ ಸಭೆ ಹಾಗೂ ರೋಡ್ ಶೋ ನಡೆಯಲಿದೆ. ಸಂಜೆ ಸುಮಾರು 5.30 ಕ್ಕೆ ಅಂಬೆಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಯಾತ್ರೆ ಸಾಗಲಿದೆ. ಸಂಜೆ 6 ರಿಂದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ.
ಸಂಜೆ 7.30 ರಿಂದ 9 ಗಂಟೆಯವರೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ , ರೊಸಾರಿಯೋ ಚರ್ಚ್ ಹಾಗೂ ಉಳ್ಳಾಲ ದರ್ಗಾ , ಭೇಟಿ ಮಾಡಲಿರುವರು .ಬಳಿಕ ಅಲ್ಲಿದ ರಾತ್ರಿ ನಗರದ ಸರ್ಕೀಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಲಿರುವವರು . ಮಾರ್ಚ್ರಂ21ದು 8.30 ರಿಂದ 10 ಗಂಟೆಯವರೆಗೆ ಉಡುಪಿ ಹಾಗೂ ದ.ಕ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆನಡೆಸಿ 10.20 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ತೆರಳುವರು .