ಉಡುಪಿ, ಮೇ 15 (Daijiworld News/MSP): ಗ್ರೀನ್ ಝೋನ್ ನಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಐವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ವಿಶೇಷದ ವಿಮಾನದ ಮೂಲಕ ದುಬೈನಿಂದ ಮೇ 12ರಂದು ಆಗಮಿಸಿದರ ಪೈಕಿ ಉಡುಪಿ ಜಿಲ್ಲೆಯ 5 ಮಂದಿಯಲ್ಲಿ ಕೋವಿಡ್-19 ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ದೃಢಪಡಿಸಿದ್ದಾರೆ.
ಐವರಲ್ಲಿ ಮೂವರು ಪುರುಷರಾಗಿದ್ದು, ಇಬ್ಬರು ಮಹಿಳೆಯರಾಗಿದ್ದಾರೆ. ವಿಶೇಷ ವಿಮಾನದಲ್ಲಿ ಬಂದ ಉಡುಪಿ ಜಿಲ್ಲೆಗೆ ಸೇರಿದ 49 ಮಂದಿಯನ್ನು ಜಿಲ್ಲೆಯ ಹೊಟೇಲ್ ನಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಇವರ ಗಂಟಲದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.ಅದರ ವರದಿ ಇಂದು ಬಂದಿದ್ದು ಸೋಂಕು ದೃಢಪಟ್ಟ ಐವರನ್ನು ಅವರು ಉಳಿದುಕೊಂಡಿರುವ ಹೊಟೇಲ್ನಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.