ಬೆಳ್ಮಣ್, ಮೇ 15 (Daijiworld News/MSP): ಮುಂಬೈನಿಂದ ಬಂದ ವ್ಯಕ್ತಿಯೊಬ್ಬರು ದ.ಕ ಜಿಲ್ಲೆಯ ಗಡಿಯಿಂದ ಉಡುಪಿ ಜಿಲ್ಲೆಯ ಸಚ್ಚೇರಿಪೇಟೆ ಗಡಿಯನ್ನು ಕಾಲು ನಡಿಗೆಯಲ್ಲಿ ದಾಟುವ ವೇಳೆ ಚೆಕ್ ಪೋಸ್ಟ್ ಸಿಬ್ಬಂದಿಗಳು ವಿಚಾರಿಸಿ ವ್ಯಕ್ತಿಯನ್ನು ಕ್ವಾರೆಂಟೈನ್ ಮಾಡಲಾದ ಘಟನೆ ಗುರುವಾರ ಸಚ್ಚೇರಿಪೇಟೆಯಲ್ಲಿ ನಡೆದಿದೆ.
ಮುಂಬಯಿಂದ ಮೂರು ಮಂದಿ ದ.ಕ ಜಿಲ್ಲೆಯ ಮೂಡಬಿದ್ರೆಗೆ ಪಾಸ್ ಮೂಲಕ ಬಂದಿದ್ದು ಅದರಲ್ಲಿ ಮೂಡಬಿದ್ರೆಯ ನಿವಾಸಿಗಳು ಎರಡು ಮಂದಿ ಅಲ್ಲಿ ಕ್ವಾರೆಂಟೈನ್ ಆಗಿದ್ದು ಓರ್ವ ವ್ಯಕ್ತಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದವರಾಗಿದ್ದು ಅವರನ್ನು ಕಾರ್ಕಳದಲ್ಲಿ ಕ್ವಾರೆಂಟೈನ್ ಆಗುವಂತೆ ಸೂಚಿಸಿ ಕಳುಹಿಸಿ ಕೊಡಲಾಗಿತ್ತು. ಆದರೆ ಆ ವ್ಯಕ್ತಿ ಆಟೋ ರಿಕ್ಷದ ಮೂಲಕ ಸಚ್ಚೇರಿಪೇಟೆಯ ಚೆಕ್ ಪೋಸ್ಟ್ ಬಳಿಯ ವರೆಗೆ ಬಂದು ಬಳಿಕ ಅಲ್ಲಿಂದ ಕಾಲು ನಡಿಗೆಯಲ್ಲಿ ನಡೆದುಕೊಂಡು ತನ್ನ ಮನೆಯನ್ನು ಸೇರುವುದಕ್ಕೆ ಬರುತ್ತಿರುವ ವೇಳೆ ಸಚ್ಚೇರಿಪೇಟೆ ಚೆಕ್ ಪೋಸ್ಟ್ ಸಿಬ್ಬಂದಿಗಳು ವಿಚಾರಿಸಿದಾಗ ವ್ಯಕ್ತಿಯ ಕೈಯಲ್ಲಿ ಸೀಲ್ ಇದ್ದು ಮುಂಬಯಿಂದ ಮೂಡಬಿದ್ರೆಗೆ ಬಂದು ಅಲ್ಲಿಂದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿರುವ ತನ್ನ ಮನೆಗೆ ಹೋಗುತ್ತಿರುವ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು ಬಂದು ಡಿಎಸ್ಪಿ ಭರತ್ ರೆಡ್ಡಿ ಯವರ ಆದೇಶದಂತೆ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಕಾರ್ಕಳದಲ್ಲಿ ಕ್ವಾರೆಂಟೈನ್ ಮಾಡಲಾಯಿತು.