ಕಾಸರಗೋಡು, ಮೇ 15 (DaijiworldNews/SM): ಕೊರೊನಾ ಸೋಂಕಿತ ಪೈವಳಿಕೆಯ ಸಾಮಾಜಿಕ ಕಾರ್ಯಕರ್ತ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಈ ನಡುವೆ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗಲಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಮೂರು ಬಾರೀ ಸಾಮಾಜಿಕ ಕಾರ್ಯಕರ್ತ ಆಸ್ಪತ್ರೆಗೆ ರೋಗಿ ಓರ್ವನನ್ನು ಕರೆದುಕೊಂಡು ಬಂದಿದ್ದು, ವೈದ್ಯರನ್ನು ಹಾಗೂ ಲ್ಯಾಬ್ ನ ಸಿಬ್ಬಂದಿಗಳನ್ನು ಭೇಟಿ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ಕ್ಯಾನ್ಸರ್ ವಾರ್ಡ್, ಲ್ಯಾಬ್, ಎಕ್ಸ್ ರೆ ಘಟಕಕ್ಕೆ ಸಂದರ್ಶಿಸಿದ್ದು, ಇವರಿಂದ ಆಸ್ಪತ್ರೆಯ ಇತರ ಸಿಬ್ಬಂದಿಗಳಿಗೂ ಸೋಂಕು ಹರಡಿರಬಹುದೇ ಎಂಬ ಸಂಶಯ ಉಂಟಾಗಿದೆ. ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಓರ್ವ ದಾದಿ ಈಗಾಗಲೇ ಕ್ವಾರಂಟೈನ್ ನಲ್ಲಿ ತೆರಳಿದ್ದಾರೆ.