ಕಾಸರಗೋಡು, ಮೇ 16 (Daijiworld News/MSP): ಸಾಮಾಜಿಕ ಕಾರ್ಯಕರ್ತ ಮತ್ತು ಜನಪ್ರತಿನಿಧಿಯಿಂದ ಗಂಭೀರ ಲೋಪದಿಂದ ಹಲವು ಮಂದಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಇದ್ದು ಕಾಸರಗೋಡಿನಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸರಕು ಲಾರಿಯ ಮೂಲಕ ಪಾಸ್ ಇಲ್ಲದೆ ಮುಂಬೈಯಿಂದ ಬಂದಿದ್ದ ವ್ಯಕ್ತಿಯೋರ್ವ ಕಾಸರಗೋಡು ಪ್ರವೇಶಸಿರುವ ಬಗ್ಗೆ ಮಾಹಿತಿ ದೊರಕಿದ್ದು, ಈತನನ್ನು ಸಾಮಾಜಿಕ ಕಾರ್ಯಕರ್ತನೋರ್ವ ರಾಜಕೀಯ ಒತ್ತಡದಿಂದ ತಲಪಾಡಿ ಗಡಿ ದಾಟಿಸಿದ್ದ
ಸಾಮಾಜಿಕ ಕಾರ್ಯಕರ್ತ ಪ್ರಮುಖ ಪಕ್ಷದ ಮುಖಂಡನೂ ಆಗಿದ್ದಾನೆ. ಇನ್ನು ಮುಂಬೈ ನಿಂದ ಬಂದ ಸೋಂಕು ಪೀಡಿತನನ್ನು ಮನೆಗೆ ತಲುಪಿಸಿದ ಬಳಿಕ ಸಾಮಾಜಿಕ ಕಾರ್ಯಕರ್ತ ಹಾಗೂ ಆತನ ಪತ್ನಿ ಕ್ವಾರಂಟೈನ್ ಗೆ ತೆರಳದೆ ಇಬ್ಬರೂ ಹಲವೆಡೆ ಸಂಚಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಕಾರ್ಯಕರ್ತ ಜಿಲ್ಲಾಸ್ಪತ್ರೆಗೆ ಮೂರು ಬಾರಿ ಭೇಟಿ ನೀಡಿದ್ದು ಗ್ರಾಮ ಪಂಚಾಯತ್ ಹಾಗೂ ಹಲವು ಕಡೆಗೆ ತೆರಳಿದ್ದಾನೆ.
ಅಲ್ಲದೆ ಮಹಾರಾಷ್ಟ್ರದಿಂದ ಬಂದಿದ್ದ ಸಂಬಂಧಿಕನನ್ನು ಅಕ್ರಮವಾಗಿ ಕೇರಳಕ್ಕೆ ಪ್ರವೇಶಿಸಲು ಅನುಮತಿ ಮಾಡಿ ಕೊಟ್ಟ ದಂಪತಿಯಿಂದ ಕ್ವಾರಂಟೈನ್ ನಿಯಮ ಉಲ್ಲಂಘಸಿರುವುದು ಕಂಡುಬಂದಿದೆ.
ಜಿಲ್ಲಾಸ್ಪತ್ರೆಯ ವೈದ್ಯರು , ಸಿಬಂದಿಗಳನ್ನು ಭೇಟಿಯಾಗಿದ್ದ ನೂರಕ್ಕೂ ಅಧಿಕ ಮಂದಿಯ ನೇರ ಸಂಪರ್ಕಕ್ಕೆ ಬಂದಿದ್ದಇದೀಗ ಇವರ ಸಂಪರ್ಕಕ್ಕೆ ಬಂದ ಹದಿನಾರು ಮಂದಿ ಐಸೋಲೇಷನ್ ವಾರ್ಡ್ ಗೆ ದಾಖಲಾಗಿದ್ದಾರೆ.