ಕಾಪು, ಮೇ 16 (Daijiworld News/MSP): ಮುಂಬೈಯಿಂದ ತಮ್ಮ ತವರೂರಿಗೆ ಆಗಮಿಸಿದ ಜನರನ್ನು ಕಾಪು ತಾಲೂಕಿನ ವಿವಿಧ ಕಡೆಗಳಲ್ಲಿ ಕ್ವಾರೈಂಟನ್ ನಲ್ಲಿ ಇಡಲಾಗಿದೆ. ಅವರಿಗೆ ತಾಲೂಕು ಪಂಚಾಯತ್ ವತಿಯಿಂದ ಊಟೋಪಚಾರಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್ ಹೇಳಿದ್ದಾರೆ.
ಅವರು ಕಾಪು ತಹಶಿಲ್ದಾರ್ ಅವರ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ನಾವು ಮೊದಲ ಹಂತದಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಟ್ಟಿದ್ದೇವೆ. ಎರಡನೇ ಹಂತವಾಗಿ ಈ ಊರಿನವರು ಮುಂಬೈ ಮತ್ತಿತರ ಪ್ರದೇಶಗಳಿಂದ ನಮ್ಮಲ್ಲಿಗೆ ಬಂದಿದ್ದು, ಅವರಿಗೆ ಸರಕಾರದ ಆಧೇಶದಂತೆ 14 ದಿನಗಳ ಕ್ವಾರೈಂಟೇನ್ ಮಾಡಬೇಕೆಂಬ ನಿರ್ದೇಶನದಂತೆ ಅವರನಿಲ್ಲಿ ಕರೆಸಲಾಗಿದೆ. ಈಗಾಗಲೇ ಸರಿ ಸುಮಾರು 200 ಜನರು ಕಾಪುವಿಗೆ ಆಗಮಿಸಿದ್ದಾರೆ. ಅವರನ್ನು ಪುರಸಭಾ ಭವನದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಂತರ ಅವರನ್ನು ಸರಕಾರಿ ಕ್ವರೈಂಟನಿನಲ್ಲಿ ಉಚಿತವಾಗಿ ಇಡಲಾಗಿದೆ. ಅವರಿಗೆ ಉಚಿತ ಊಟ ಉಪಚಾರವನ್ನು ಕಾಪು ಹೊಸ ಮಾರಿಗುಡಿಯ ವತಿಯಿಂದ ನೀಡಲಾಗುತ್ತಿದೆ. ಖಾಸಗಿಯಾಗಿ ಯಾರು ಹೊಟೇಲಿನಲ್ಲಿ ಉಳಿಯ ಬಯಸುತ್ತಾರೋ ಅವರು ಹೊಟೇಲಿನ ಬಿಲ್ ಪಾವತಿಸಬೇಕಾಗಿದೆ.
ಸರಕಾರಿ ಕ್ವಾರೈಂಟೇನ್ನಲ್ಲಿ 123ಜನ ಉಳಿದುಕೊಂಡಿದ್ದು, ಉಳಿದವರು ಖಾಸಗಿಯಾಗಿ ಉಳಕೊಂಡಿದ್ದಾರೆ. ಇನ್ನಷ್ಟು ಜನರು ಬರುವ ನಿರೀಕ್ಷೆ ಇದೆ. ಎರಡು ರೈಲುಗಳು ಬರಲಿದ್ದು, ಅದರಲ್ಲಿ ಕಾಪು ತಾಲೂಕಿಗೆ ಸಂಬಂದ ಪಟ್ಟವರನ್ನು ಇಲ್ಲಿ ಉಳಿಸಿಕೊಳ್ಳುವ ಸಂಪೂರ್ಣ ಸಿದ್ಧತೆ ಆಗಿದೆ. ಕ್ವಾರೈಂಟೇನ್ನಲ್ಲಿ ಇರುವವರು ಯಾರೂ ಒಳಗೆ ಬರುವಂತಿಲ್ಲ. ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಮನೆಯವರು ಒಮ್ಮೆ ಮಾತ್ರಾ ಬಂದು ಅವರಿಗೆ ಬೇಕಾದ ಬಟ್ಟೆ, ಬೆಡ್ಶೀಟ್ ಮತ್ತಿತರ ಸಾಮಾನು ಸರಂಜಾಮುಗಳನ್ನು ನೀಡಲು ಆಸ್ಪದ ನೀಡಲಾಗಿದೆ ಎಂದರು.