ಕಾಸರಗೋಡು, ಮೇ 17 (DaijiworldNews/SM): ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ಒಂದೇ ದಿನದಲ್ಲಿ ಇಮ್ಮಡಿಯಾಗಿದೆ. ಶನಿವಾರ 1555 ಮಂದಿ ಕ್ವಾರಂಟೈನ್ ನಲ್ಲಿದ್ದರು. ಆದರೆ, ರವಿವಾರದಂದು ಕ್ವಾರಂಟೈನ್ ನಲ್ಲಿದ್ದವರ ಸಂಖ್ಯೆ 2162ಕ್ಕೆ ಏರಿಕೆಯಾಗಿದೆ.
ಜಿಲ್ಲೆಯು ಕೊರೋನಾ ಮುಕ್ತವಾಗಿ 900ಕ್ಕೆ ತಲಪಿದ್ದ ಕ್ವಾರಂಟೈನ್ ನಲ್ಲಿದ್ದವರ ಸಂಖ್ಯೆ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ದಿನ ಕಳೆದಂತೆ ಏರಿಕೆಯಾಗುತ್ತಿದೆ. ಇನ್ನು 2162 ಮಂದಿಯಲ್ಲಿ 275 ಮಂದಿ ಮನೆಯಲ್ಲಿ ನಿಗಾದಲ್ಲಿದ್ದಾರೆ. ಆದಿತ್ಯವಾರ 20 ಮಂದಿಯನ್ನು ಐಸೋಲೇಷನ್ ಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಆದಿತ್ಯವಾರ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದ ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ ಹದಿನೈದಕ್ಕೇರಿದೆ.
ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಿವಾಸಿ 25 ವರ್ಷ ಪ್ರಾಯದ ಯುವಕನಿಗೆ ಸೋಂಕು ತಗಲಿದೆ. ಇವರನ್ನು ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಕಣ್ಣೂರು ಮಟ್ಟನ್ನೂರು ನಿವಾಸಿಯಾಗಿರುವ ಇವರ ಸಹದ್ಯೋಗಿಯಿಂದ ಇವರಿಗೆ ಸೋಂಕು ತಗುಲಿದೆ.