ಉಡುಪಿ, ಮೇ 17 (DaijiworldNews/SM): ರವಿವಾರ ಸಂಜೆಯ ಗುಡುಗು ಸಿಡಿಲಿನ ಆಘಾತದಿಂದಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಟಪಾಡಿ ಏಣಗುಡ್ಡೆಯಲ್ಲಿ ನಡೆದಿದೆ. ಕಟಪಾಡಿ ಜೆ.ಎನ್. ನಗರ ಪಡು ನಿವಾಸಿ ಸುರೇಶ್ ಎಂಬವರ ಪುತ್ರ ಭರತ್(22) ಮೃತ ಯುವಕ.
ರವಿವಾರದಂದು ಸಂಜೆಯ ವೇಳೆಗೆ ಏಕಾಏಕಿ ಗುಡುಗು ಸಹಿತ ಮಳೆಯಾಗಿದೆ. ಭಾರೀ ಸಿಡಿಲಿನಿಂದಾಗಿ ಮನೆಯಲ್ಲಿ ಕುಳಿತಿದ್ದ ಯುವಕನಿಗೆ ಆಘಾತವಾಗಿದೆ. ತಕ್ಷಣ ಆತನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ಅಷ್ಟರಲ್ಲೇ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.