ಮಂಗಳೂರು, ಮೇ 18 (Daijiworld News/MSP): ಕೇಂದ್ರ ಸರ್ಕಾರದ ವಂದೇ ಮಾತರಂ ಕಾರ್ಯಾಚರಣೆಯಂತೆ ದುಬೈನಿಂದ ಎರಡನೇ ವಿಮಾನ ಮೇ. 18 ರ ಇಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ.
ಮೇ 12 ರಂದು ದುಬೈ ನಿಂದ ಬಂದ ವಿಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15 ಮಂದಿ ಮತ್ತು ಉಡುಪಿಯ 6 ಮಂದಿಗೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಪೂರ್ಣ ಸ್ಯಾನಿಟೈಸೇಶನ್ ಪ್ರಕ್ರಿಯೆ ನಡೆಯಲಿದ್ದ ಸೋಮವಾರ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ.
ಇಂದಿನ ವಿಮಾನದಲ್ಲಿ ೩೫ ಗರ್ಭಿಣಿಯರ ಸಹಿತ ೧೭೩ ಮಂದಿ ಪ್ರಯಾಣಿಕರನ್ನು ಈ ವಿಮಾನ ಕರೆತರಲಿದೆ. ವಿದೇಶದಿಂದ ಬರುವ ಪ್ರಯಾಣಿಕರ ತಪಾಸಣೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ನಿಲ್ದಾಣದಲ್ಲಿಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿದೆ. ಸಾರ್ವಜನಿಕರು , ಪ್ರಯಾಣಿಕರು ಕುಟುಂಬಸ್ಥರಿಗೆ ನಿಲ್ದಾಣಕ್ಕಾಗಲಿ ಕ್ವಾರಂಟೈನ್ ಕೇಂದ್ರಗಳಿಗಾಗಿ ಬರಲು ಅವಕಾಶ ಇಲ್ಲ. ಲಗೇಜ್ ಗಳನ್ನು ಕೊಂಡೊಯ್ಯಲು ಜಿಲ್ಲಾಡಳಿತದ ವತಿಯಿಂದ ಕೆಲವರನ್ನು ಆರೋಗ್ಯ ಸುರಕ್ಷಾ ಕವಚದೊಂದಿಗೆ ನೇಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕ್ವಾರಂಟಿಅನ್ ಕೇಂದ್ರಗಳಿಗೆ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದೆ.