ಮಂಗಳೂರು, ಮೇ 18 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಯೋಜನೆ ಮುಖೇನ ಪ್ಯಾಕೇಜ್ ಘೋಷಣೆ ಮಾಡಿದ್ದು ಬ್ಯಾಂಕುಗಳು ಇದರ ನೇತೃತ್ವ ವಹಿಸಿ ಪ್ರಚಾರ ನೀಡಬೇಕು. ಈ ಮೂಲಕ ಯಾರೂ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರೋ ಅವರಿಗೆ ತಲುಪುವಂತೆ ಮಾಡಬೇಕು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸೋಮವಾರ ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರವು ಯೋಜನೆಗಳ ಮೂಲಕವಾಗಿ ಪರಿಹಾರ ಘೋಷಣೆ ಮಾಡಿದೆ. ಒಂದೊಂದು ಯೋಜನೆಯ ನೇತೃತ್ವವನ್ನು ಒಂದೊಂದು ಬ್ಯಾಂಕ್ಗಳು ವಹಿಸಿಕೊಂಡು ಪ್ರಚಾರ ನೀಡಬೇಕು ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ಸರ್ಕಾರದ ಆದ್ಯತಾ ವಲಯದ ಪ್ರಗತಿ ಮಾಹಿತಿ ನೀಡದ ಹಾಗೂ ಸಭೆಗೆ ಹಾಜರಾಗದ ಬ್ಯಾಂಕ್ಗಳಿಗೆ ಎಚ್ಚರಿಕೆ ನೀಡಿದ ಅವರು, ಅಂತಹ ಬ್ಯಾಂಕ್ನಲ್ಲಿರುವ ಸರ್ಕಾರದ ಮುಂಗಡ ಹಾಗೂ ಖಾತೆಗಳನ್ನು ಹಿಂಪಡೆಯಲಾಗುತ್ತದೆ ಎಂದು ತಿಳಿಸಿದರು.