ಮಂಗಳೂರು, ಮೇ 18 (DaijiworldNews/PY) : ಅರಬ್ಬಿ ಸಮುದ್ರದ ಮೇಲ್ಮೈ ಸುಳಿ ಗಾಳಿ ಕಾಣಿಸಿಕೊಂಡಿದ್ದು, ಇದರ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಮೇ 18 ಹಾಗೂ ಮೇ 19 ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದ.ಕ ಜಿಲ್ಲೆಗೆ ಭಾರತೀಯ ಹವಾಮಾನ ಇಲಾಖೆಯು ಮೇ 18 ಹಾಗೂ ಮೇ 19 ರ ಬೆಳಗ್ಗೆಯವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, 64 ಮಿ.ಮಿ ನಿಂದ 115 ಮಿ.ಮಿ ವರೆಗೆ ಮಳೆ ಬೀಳುವ ಸಾಧ್ಯತೆ ಇರುತ್ತದೆ ಎಂದು ಸೂಚನೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರದಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೆ 1077 ದೂರವಾಣಿಗೆ ಸಂಪರ್ಕಿಸಬೇಕು ಎಂದು ತಿಳಿಸಿದೆ.
ಇಂದು ಕರಾವಳಿ ಕರ್ನಾಟಕದಲ್ಲಿ 75%, ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ 15.6-64.4 ಮಿ.ಮಿ ಮಳೆಯಾಗಿದೆ. ಇನ್ನು ಉತ್ತರ ಒಳನಾಡಿನಲ್ಲಿ 2.5 ಮಿ.ಮಿ-15.5 ಮಿ.ಮಿ ಮಳೆಯಾಗಿದೆ. ಚಾಮರಾಜ ನಗರದಲ್ಲಿ 2.5 ಮಿ.ಮಿ - 64.4ಮಿ.ಮಿ ಮಳೆಯಾಗಿದೆ. ಶಿವಮೊಗ್ಗದಲ್ಲಿ 15.6-64.4 ಮಿ.ಮಿ. ದಕ್ಷಿಣ ಒಳನಾಡಿನ ಉಳಿದ ಪ್ರದೇಶಗಳಲ್ಲಿ 2.5 ಮಿ.ಮಿ - 64.4ಮಿ.ಮಿ ಮಳೆಯಾಗಿದೆ.