ಕಾಸರಗೋಡು, ಮೇ 18 (DaijiworldNews/SM): ಕೇರಳದಲ್ಲಿ ಬಸ್ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪ್ರಯಾಣ ದರ ಏರಿಕೆಯೊಂದಿಗೆ ಬಸ್ ಗಳು ಓಡಾಟ ನಡೆಸಲಿವೆ.
ಕನಿಷ್ಠ ದರವನ್ನು ಎಂಟು ರೂಪಾಯಿಯಿಂದ 12 ರೂಪಾಯಿಗೆ ಹೆಚ್ಚಿಸಲಾಗಿದೆ. ಬುಧವಾರದಿಂದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಗಳಲ್ಲಿ ಈ ಹಿಂದೆ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೆ, ಇದೀಗ ಅದಕ್ಕೆ ಕಡಿವಾಣ ಹಾಕಲಾಗಿದೆ. ನಿಗದಿಯಂತೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಒಂದು ಸಂದರ್ಭದಲ್ಲಿ ಪ್ರಯಾಣಿಸಲು ಅವಕಾಶ ಇರಲಿದೆ.
ಇನ್ನು ಜಿಲ್ಲೆಯ ಒಳಗಡೆ ಮಾತ್ರ ಬಸ್ಸು ಮಾತ್ರ ಸಂಚಾರಕ್ಕೆ ಕೇರಳದಲ್ಲಿ ಅವಕಾಶ ಇರಲಿದೆ. ಕಾಸರಗೋಡು ಜಿಲ್ಲೆಯ ಬಸ್ ಗಳು ಕೇವಲ ಜಿಲ್ಲೆಯಲ್ಲಿ ಮಾತ್ರವೇ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಇನ್ನು ಬಸ್ ಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಲೇಬೇಕಾಗಿದೆ. ಸರಕಾರ ಹೊರಡಿಸಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾಗಿದೆ.
ಇನ್ನು ಇದರೊಂದಿಗೆ ಕ್ಷೌರದಂಗಡಿ ಹಾಗೂ ಬ್ಯೂ ಟಿ ಪಾರ್ಲರ್ ಗಳನ್ನು ತೆರೆಯಲು ಕೇರಳದಲ್ಲಿ ಅನುಮತಿ ನೀಡಲಾಗಿದೆ. ಆದರೆ ಹವಾ ನಿಯಂತ್ರಕ(ಎಸಿ) ಬಳಸುವಂತಿಲ್ಲ ಎಂದು ಸ್ಪಶ್ಟ ಆದೇಶ ನೀಡಲಾಗಿದೆ.