ಮಂಗಳೂರು, ಮೇ 19 (Daijiworld News/MB) : ಜಗತ್ತಿನಾದ್ಯಂತ ಕೊಂಕಣಿ ಮತ್ತು ತುಳು ಭಾಷೆಯಲ್ಲಿ ಆನ್ಲೈನ್ ಮೂಲಕ ಪ್ರಸಾರವಾಗಿತ್ತಿರುವ ರೇಡಿಯೊ ದಾಯ್ಜಿವಲ್ಡ್ ಮೇ 19 ರ ಮಂಗಳವಾರ ತನ್ನ ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.
2017 ರಲ್ಲಿ ಮೊದಲ ಬಾರಿಗೆ ತನ್ನ ಪ್ರಸಾರವನ್ನು ಆರಂಭಿಸಿದ ದಾಯ್ಜಿವಲ್ಡ್ ಮಾಧ್ಯಮ ಸಂಸ್ಥೆಯ ಅಂಗಸಂಸ್ಥೆಯಾಗಿರುವ ರೇಡಿಯೊ ದಾಯ್ಜಿವಲ್ಡ್ ಕೊಂಕಣಿ ಹಾಗೂ ತುಳು ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದು ಕರಾವಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಂಕಣಿ ಹಾಗೂ ತುಳು ಭಾಷೆಯಲ್ಲಿ ಸಂಗೀತವನ್ನು ಪ್ರಸಾರ ಮಾಡುವುದು ಮಾತ್ರವಲ್ಲದೇ ಕರಾವಳಿಯ ಪ್ರಮುಖ ಸುದ್ದಿಗಳನ್ನು ಕೂಡಾ ಪ್ರಸಾರ ಮಾಡುತ್ತದೆ.
ಅರುಣ್ ಡಿ ಅಲ್ಮೇಡಾ ರೇಡಿಯೊ ದಾಯ್ಜಿವಲ್ಡ್ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರ್ಜೆ ಆಗಿರುವ ಇವರು ತನ್ನ ಘಾತಾಘರ್ ಕಾರ್ಯಕ್ರಮದ ಮೂಲಕ ಜನಮನ ಗೆದಿದ್ದಾರೆ.
ಮೂರನೇ ವರ್ಷ ಪೂರೈಸಿದ ಈ ಸಂಭ್ರಮದ ದಿನದಂದು ದಾಯ್ಜಿವಲ್ಡ್ ಸಂಸ್ಥಾಪಕ, ಮುಖ್ಯ ಸಂಪಾದಕ ವಾಲ್ಟರ್ ನಂದಳಿಕೆ ಹಾಗೂ ರೇಡಿಯೋ ದಾಯ್ಜಿವಲ್ಡ್ನ ನಿರ್ದೇಶಕ ಅರುಣ್ ಡಿ ಅಲ್ಮೇಡಾ ಕೇಳುಗರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಧನ್ಯವಾದ ಸಲ್ಲಿಸಿ ಇನ್ನೂ ಉತ್ತಮ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.