ಮಂಗಳೂರು, ಮೇ 19 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ಭಾರೀ ನಷ್ಟ ಉಂಟಾಗಿರುವ ನಿಟ್ಟಿನಲ್ಲಿ ಬಸ್ಸು ಮಾಲಕರು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದು ದರ ಹೆಚ್ಚಳ ಸೇರಿ ಇತರ ಬೇಡಿಕೆ ಈಡೇರಿದರೆ ಮಾತ್ರ ಜೂನ್ನಲ್ಲಿ ಖಾಸಗಿ ಬಸ್ ಓಡಾಟ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳವಾರ ಆರ್ಟಿಓ ಕಚೇರಿಯಲ್ಲಿ ಮಂಗಳೂರಿನಲ್ಲಿ ಖಾಸಗಿ ಬಸ್ ಆರಂಭದ ಕುರಿತಾಗಿ ಬಸ್ಸು ಮಾಲಕರ ಸಂಘ ಮತ್ತು ಆರ್ಟಿಓ ಅಧಿಕಾರಿ ಸಭೆ ನಡೆದಿದ್ದು ಈ ಸಂದರ್ಭದಲ್ಲಿ ಮಾಲಕರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಮೇ ಅಂತ್ಯದವರೆಗೂ ಖಾಸಗಿ ಬಸ್ ಸಂಚಾರ ಆರಂಭಿಸಲು ಸಾಧ್ಯವಿಲ್ಲ. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ. ಹಾಗಾಗಿ ಬಸ್ನಲ್ಲಿ ಹೆಚ್ಚು ಜನರಿಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಇದರಿಂದಾಗಿ ಬಹಳ ನಷ್ಟ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ಬಸ್ ಸಂಚಾರ ದರ ಅಧಿಕ ಮಾಡಬೇಕಾಗುತ್ತದೆ. ಆದ್ದರಿಂದ ಜೂನ್ ಬಳಿಕ ಬಸ್ ಸಂಚಾರ ಆರಂಭಿಸಬೇಕಾದ್ದಲ್ಲಿ ಆರು ತಿಂಗಳ ಟ್ಯಾಕ್ಸ್ ಕಡಿತ, ಟಿಕೆಟ್ ದರ ಹೆಚ್ಚಳ ಸೇರಿ ಹಲವು ಬೇಡಿಕೆ ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಖಾಸಗಿ ಬಸ್ಗಳು ಸಂಚಾರ ಮಾಡುತ್ತಿದ್ದು ಸರ್ಕಾರ ಈ ಕುರಿತಾಗಿ ಗಮನ ಹರಿಸದಿದ್ದಲ್ಲಿ ಆರ್ಥಿಕವಾಗಿ ಬಹಳ ನಷ್ಟ ಉಂಟಾಗುತ್ತದೆ ಎಂದು ಮಾಲಕರು ಹೇಳಿದ್ದಾರೆ.
ಇನ್ನು ಎಲ್ಲಾ ಪ್ರದೇಶಗಳಿಗೆ ಖಾಸಗಿ ಬಸ್ಗಳೇ ಹೆಚ್ಚಾಗಿ ಇರುವ ಮಂಗಳೂರಿನಲ್ಲಿ ಖಾಸಗಿ ಬಸ್ಗಳು ಸಂಚಾರ ಮಾಡದಿದ್ದಲ್ಲಿ ಇಡೀ ಮಂಗಳೂರಲ್ಲಿ ಸಾರಿಗೆ ವ್ಯವಸ್ಥೆಯೇ ಸ್ತಬ್ಧವಾಗುತ್ತದೆ.