ವಿಟ್ಲ, ಮೇ 19 (Daijiworld News/MSP): ಕುವೈತ್ ನಲ್ಲಿ ಉದ್ಯೋಗಿಯಾಗಿದ್ದ ವಿಟ್ಲ ಕಾಶಿಮಠದ ಮೂಲದ ವ್ಯಕ್ತಿಯೋರ್ವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
ಇವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಪರೀಕ್ಷೆಗೊಳಗಾದ ನಂತರ ಒಂದು ವಾರದ ಹಿಂದೆ COVID-19 ಸೋಂಕಿನಿಂದ ಬಳಲುತ್ತಿರುವುದು ದೃಢವಾಗಿತ್ತು.
ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ವರ್ಷದ ಹಿಂದಷ್ಟೇ ಊರಿಗೆ ಬಂದು ಮಗಳ ಮದುವೆ ಮುಗಿಸಿ ಮತ್ತೆ ಹಿಂತಿರುಗಿದ್ದರು. ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲಾಗಿದೆ ಚರ್ಚ್ ನ ಧರ್ಮ ಗುರುಗಳ ನೇತೃತ್ವದಲ್ಲಿ ಪ್ರಾಥನಾ ವಿಧಿಗಳನ್ನು ಊರಿನ ಮನೆಯಲ್ಲಿ ನೆರವೇರಿಸಲಾಗಿದೆ.