ಮಂಗಳೂರು, ಮೇ 19 (Daijiworld News/MSP): ನಗರದ ಯೆಯ್ಯಾಡಿಯ 55 ವರ್ಷದ ಮಹಿಳೆಯಲ್ಲಿ ಸೋಮವಾರ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರು ವಾಸವಿರುವ ಕದ್ರಿ ಗ್ರಾಮದ ಯೆಯ್ಯಾಡಿಯ ಗುಂಡಲಿಕೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಸುತ್ತಮುತ್ತ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಸೋಂಕಿತರ ವಾಸವಾಗಿದ್ದ ಸುತ್ತಮುತ್ತ ನಿಯಂತ್ರಿತ ವಲಯವಾಗಿ (ಸೀಲ್ ಡೌನ್ ) ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು ೧೪ ಕ್ಕೂ ಅಧಿಕ ಮನೆಗಳಿದ್ದು 48 ಜನ ವಾಸವಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟು ಕಚೇರಿಗಳಿಲ್ಲ.
ಪೂರ್ವಕ್ಕೆ ಯಮ್ಟಿ ಹೌಸ್ , ಪಶ್ಚಿಮಕ್ಕೆ ಯಮುನಾ ಹೌಸ್, ಉತ್ತರಕ್ಕೆ ಗುಡ್ಡವಿದ್ದು, ಹಾಗೂ ದಕ್ಷಿಣಕ್ಕೆ ಲಲಿತಾಸ್ ಹೌಸ್ ತನಕದ ಪ್ರದೇಶವನ್ನು ಸೀಲ್ ಡೌಲ್ ಮಾಡಲಾಗಿದೆ
ಬೋಳೂರಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 23600 ಮನೆ, 4748 ಅಂಗಡಿ ಮುಂಗಟ್ಟು, 1,24,000 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ಪಡೀಲ್, ಪಶ್ಚಿಮಕ್ಕೆ ಎನ್. ಎಮ್ ಪಿ.ಟಿ , ಉತ್ತರಕ್ಕೆ ಮರಕಡ, ದಕ್ಷಿಣಕ್ಕೆ ರಥ ಬೀದಿ ಮಂಗಳೂರು ತನಕ ಒಳಪಡುತ್ತದೆ.