ಉಡುಪಿ, ಮೇ 21 (Daijiworld News/MB) : ಉಡುಪಿ ಜಿಲ್ಲೆಗೆ ಮುಂಬೈನಿಂದ ಬಂದ ಆರು ಮಂದಿಯಲ್ಲಿ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಹೆಬ್ರಿ ಕ್ವಾರಂಟೈನ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು ಉಡುಪಿಯಲ್ಲಿ ಈವರೆಗೆ ಸೀಲ್ಡೌನ್ಗೊಂಡಿರುವ ಮೊದಲ ಪ್ರದೇಶ ಇದಾಗಿದೆ.
ಉಡುಪಿಯಲ್ಲಿ ಬುಧವಾರ ಒಟ್ಟು ಆರು ಪ್ರಕರಣಗಳು ದೃಢಪಟ್ಟಿದ್ದು ಇವರೆಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ. ಈ ಆರು ಜನರ ಪೈಕಿ ಇತ್ತೀಚೆಗೆ ಮೃತಪಟ್ಟ ಪ್ರಾಥಮಿಕ ಸಂಪರ್ಕ ಹೊಂದಿದ ಇಬ್ಬರಿದ್ದಾರೆ.
ಬುಧವಾರ ಕುಂದಾಪುರದಲ್ಲಿ ಕ್ವಾರಂಟೈನ್ನಲ್ಲಿದ್ದ 4 ಹಾಗೂ 15 ವರ್ಷದ ಬಾಲಕಿ, ಹೆಬ್ರಿಯಲ್ಲಿ ಕ್ವಾರಂಟೈನ್ನಲ್ಲಿದ್ದ 31 ಹಾಗೂ 41 ವರ್ಷದ ಮಹಿಳೆ, ಬೈಂದೂರು ತಾಲೂಕಿನ 55 ಹಾಗೂ 74 ವರ್ಷದ ಪುರುಷರಿಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಹೆಬ್ರಿ ಕ್ವಾರಂಟೈನ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ಇನ್ನು ಈ ಆರು ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದ 120೦ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಉಡುಪಿಯಲ್ಲಿ ಒಟ್ಟು 366 ಮಂದಿ ಮನೆಗಳಲ್ಲಿ, 55 ಮಂದಿ ಆಸ್ಪತ್ರೆಗಳಲ್ಲಿ ಹಾಗೂ 94 ಮಂದಿ ಐಸೋಲೇಶನ್ ವಾರ್ಡ್ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ.
ಇನ್ನು ಮಾದರಿಗಳ ಸಂಗ್ರಹವೂ ಏರಿಕೆಯಾಗಿದ್ದು 987 ಮಾದರಿಯ ವರದಿ ನಿರೀಕ್ಷೆಯಲ್ಲಿದೆ.