ಉಡುಪಿ, ಮೇ 21 (DaijiworldNews/PY) : ಹೋಂಕ್ವಾರಂಟೈನ್ನಲ್ಲಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಹಳೆ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಕಾರ್ಕಳದ ಮರ್ಣೆ ಗ್ರಾಮದಲ್ಲಿ ನಡೆದಿದೆ.
ಪರಾರಿಯಾದ ಮಹಿಳೆಯನ್ನು ಅಜೆಕಾರು ಕೈಕಂಬ ನಿವಾಸಿ ಮುಬೀನಾ (28) ಎನ್ನಲಾಗಿದೆ.
8 ವರ್ಷದ ಹಿಂದೆ ಮುಬೀನಾ ಉದ್ಯಾವರದ ಸಾಜೀದ್ ಎಂಬಾತನೊಂದಿಗೆ ವಿವಾಹವಾಗಿದ್ದು, ಬಳಿಕ ಅವರು ಪುಣೆಯ ಲೋನಾವಲದಲ್ಲಿ ನೆಲೆಸಿದ್ದಳು. ಈ ದಂಪತಿಗೆ 8 ವರ್ಷದ ಮಗಳೂ ಇದ್ದಾಳೆ. ಆದರೆ, ಕೌಟುಂಬಿಕ ಮನಸ್ತಾಪದ ಕಾರಣದಿಂದ ಮುಬೀನಾ ತನ್ನ ತವರು ಮನೆಗೆ ವಾಪಾಸ್ಸಾಗಿದ್ದಳು.
ಇತ್ತೀಚೆಗೆ ಮಂಗಳೂರಿಗೆ ವಿವಾಹ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣ ತಾಯಿ ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದಳು. ಆದರೆ, ಹೋಂ ಕ್ವಾರಂಟೈನ್ ಸಮಯ ಮುಗಿಯುತ್ತಿದ್ದಂತೆ ಆಕೆ ತನ್ನ ಹಳೆಯ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಮುಬೀನಾ ಕಾಣೆಯಾಗಿರುವ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆಕೆ ಪತ್ತೆಯಾಗಿದ್ದು, ಪೋಷಕರೊಂದಿಗೆ ಆಕೆಯನ್ನು ಕಳುಹಿಸಲಾಗಿದೆ.