ಬಂಟ್ವಾಳ, ಮೇ 21 (DaijiworldNews/PY) : ಬಂಟ್ವಾಳ ಪೇಟೆಯು ಕಳೆದ ಒಂದು ತಿಂಗಳಿನಿಂದ ಸೀಲ್ಡೌನ್ ಆಗಿದ್ದು, ಸೀಲ್ಡೌನ್ ತೆರವಿಗಾಗಿ ಬಂಟ್ವಾಳದ ಕಸಬಾ ಪೇಟೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸೀಲ್ಡೌನ್ ಆಗಿದ್ದು, ಬಂಟ್ವಾಳದ ಮುಖ್ಯ ರಸ್ತೆ ಬಂದ್ ಆಗಿತ್ತು. ಸೀಲ್ಡೌನ್ ತೆರವಿಗಾಗಿ ಜನರು ಸಂಜೆ 6 ಗಂಟೆಗೆ ಗಡವು ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶ ಬಾರದೇ ಇದ್ದ ಹಿನ್ನಲೆ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಬಂಟ್ವಾಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದ ಕಾರಣ ಸೀಲ್ಡೌನ್ ಮಾಡಲಾಗಿತ್ತು.