ಬಂಟ್ವಾಳ, ಮೇ 22 (DaijiworldNews/PY) : ಬಂಟ್ವಾಳದಲ್ಲಿ ಸೀಲ್ಡೌನ್ ತೆರವು ಮಾಡಲು ಪ್ರತಿಭಟನೆ ನಡೆದ ಹಿನ್ನೆಲೆ 30 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಂಟ್ವಾಳ ಸೀಲ್ಡೌನ್ ಆಗಿ ಒಂದು ತಿಂಗಳು ಆಗಿತ್ತು. ಈ ಹಿನ್ನಲೆ ಸೀಲ್ಡೌನ್ ತೆರವು ಮಾಡುವಂತೆ ಜನರು ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಆದೇಶವನ್ನು ಮೀರಿ ಪ್ರತಿಭಟನೆ ಮಾಡಿದ ಹಿನ್ನಲೆ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, 30 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮೇ 21 ಗುರುವಾರದಂದು ಬಂಟ್ವಾಳ ಕಸಬಾ ಪೇಟೆಯ ಜನರು ಸೀಲ್ಡೌನ್ ತೆರವು ಮಾಡುವಂತೆ ಪ್ರತಿಭಟನೆ ನಡೆಸಿದ್ದರು.