ಉಡುಪಿ, ಮೇ 22 (DaijiworldNews/PY) : ಜಿಲ್ಲೆಯಲ್ಲಿ ಶುಕ್ರವಾರ ಮೂರು ಕೊರೊನಾ ಪಾಸಿಟಿವ್ ವರದಿಯಾಗಿದೆ.
ಕೊರೊನಾ ಪಾಸಿಟಿವ್ ದೃಢಪಟ್ಟ ಮೂವರೂ ಕೂಡಾ ಮಹಾರಾಷ್ಟ್ರದಿಂದ ಹಿಂದಿರುಗಿದ್ದವರಾಗಿದ್ದಾರೆ. ಈ ಪೈಕಿ ಇಬ್ಬರು 31 ವರ್ಷ ಹಾಗೂ 55 ವರ್ಷ ವಯಸ್ಸಿನ ಪುರುಷರಾಗಿದ್ದು, ಮತ್ತೋರ್ವ ಮಹಿಳೆ 48 ವರ್ಷ ವಯಸ್ಸಿನವರಾಗಿದ್ದಾರೆ.
ಮೂವರನ್ನು ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಕ್ವಾರಂಟೈನ್ನಲ್ಲಿಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 50 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಗುಣಮುಖರಾಗಿದ್ದಾರೆ. 46 ವರದಿ ಸಕ್ರಿಯವಾಗಿದೆ.