ಮೂಡುಬಿದಿರೆ, ಮೇ 22 (DaijiworldNews/SM): ಇಲ್ಲಿನ ಕ್ವಾರಂಟೈನ್ ಸೆಂಟರ್ ನಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಯಲ್ಲಿ ಇದೀಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮೃತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇದರ ವರದಿ ಶುಕ್ರವಾರ ಲಭ್ಯವಾಗಿದೆ. ಮೃತರ ಪರೀಕ್ಷಾ ವರದಿಯಲ್ಲಿ ಕೋವಿಡ್-೧೯ ಸೋಂಕು ದೃಢಪಟ್ಟಿದೆ.
ಇನ್ನು ಈ ವ್ಯಕ್ತಿ ಜಿಲ್ಲಾಡಳಿತ ನಿಗದಿ ಪಡಿಸಿದ ಚೆಕ್ ಪೋಸ್ಟ್ ಮೂಲಕ ಬಾರದೆ, ಸಚ್ಚೇರಿಪೇಟೆ ಒಳ ರಸ್ತೆಯ ಮೂಲಕ ಮೂಡುಬಿದಿರೆ ಕಡಂದಲೆ ಗ್ರಾಮಕ್ಕೆ ಬಂದಿದ್ದರು. ಬಳಿಕ ಅವರನ್ನು ದ.ಕ. ಹಿರಿಯ ಪ್ರಾ. ಶಾಲೆ ಕಡಂದಲೆ ಮೈನ್ ನಲ್ಲಿ ಕ್ವಾರಂಟೈನ್ ಗೊಳಪಡಿಸಲಾಗಿತ್ತು. ಆದರೆ, ಕೊರೊನಾ ಭೀತಿ ಹಾಗೂ ವೈಯುಕ್ತಿಕ ಕಾರಣದಿಂದ ಅವರು ಗುರುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಟಲ ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗಿದ್ದು, ಇದೀಗ ವರದಿ ಲಭ್ಯವಾಗಿದ್ದು, ಪಾಸಿಟಿವ್ ಬಂದಿದೆ.
ಇನ್ನು ಮೃತರ ಕುಟುಂಬದ ಸಹಮತಿಯಲ್ಲಿ, ವೈದ್ಯಕೀಯ ಶಿಷ್ಟಾಚಾರದಂತೆ ಬೋಳೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.