ಮಂಗಳೂರು, ಮೇ 23 (DaijiworldNews/PY) : ನಾಳೆ ಸಂಪೂರ್ಣವಾಗಿ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನಲೆ, ಇಂದು ಸಂಜೆ ಏಳು ಗಂಟೆಯಿಂದ ಸಂಪೂರ್ಣ ಲಾಕ್ಡೌನ್ ಮಾಡಲು ದ.ಕ ಜಿಲ್ಲಾದಿಕಾರಿ ಸಿಂಧೂ.ಬಿ.ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ.
ನಾಳೆ ಸಂಪೂರ್ಣವಾಗಿ ಲಾಕ್ಡೌನ್ ಇದ್ದರೂ ಸಹ ಒಂದೆಡೆ ನಾಳೆ ಮೀನು, ತರಕಾರಿ, ಮಾಂಸ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಮದುವೆ ಕಾರ್ಯಕ್ರಮಗಳಿಗೆ ಹೋಗುವವರಿಗೆ ಪಾಸ್ ಇದ್ದರಷ್ಟೇ ಹೋಗಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇನ್ನೂ ಖಾಸಗಿ ವಾಹನ ಸಂಚಾರವನ್ನೂ ನಿಷೇಧಿಸಲಾಗಿದ್ದು, ಜನರ ಅನಗತ್ಯ ಓಡಾಟವನ್ನೂ ನಿಷೇಧಿಸಲಾಗಿದೆ. ಮೀನು, ಮಾಂಸ, ತರಕಾರಿ ಅಂಗಡಿ ಹೊರತುಪಡಿಸಿ ಎಲ್ಲಾ ತರದ ಅಂಗಡಿಗಳು ಬಂದ್ ಆಗಲಿವೆ. ಎಂದು ತಿಳಿಸಿದ್ದಾರೆ.
ಜನರಿಗೆ ರಸ್ತೆಗೆ ಇಳಿಯದಂತೆ ಆದೇಶ ನೀಡಿದ್ದು, ಮತ್ತೊಂದೆಡೆ ತರಕಾರಿ, ಮೀನು ಮಾರಾಟಕ್ಕೆ ಅವಕಾಶ ನೀಡಿರುವ ಜಿಲ್ಲಾಡಳಿತದ ಆದೇಶದಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ.