ಮಾ ,21 : ಮೊಬೈಲ್ ಸ್ಫೋಟಗೊಂಡು ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಒಡಿಶಾದ ಕೆರಿಯಾಖಾನಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಉಮಾ ಒರಾಮ್ (18) ಎಂದು ಗುರುತಿಸಲಾಗಿದೆ. ಉಮಾ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ. ಉಮಾ ಬಳಸುತ್ತಿದ್ದ ನೋಕಿಯಾ ಕಂಪನಿಯ 5233 ಫೋನ್ ಚಾರ್ಜ್ ಹಾಕಿದ್ದಾಗ ಸಂದರ್ಭ ಸಂಬಂಧಿಕರ ಕರೆ ಬಂದಿದೆ. ಹೀಗಾಗಿ ಫೋನ್ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ವೇಳೆ ಮೊಬೈಲ್ ತಕ್ಷಣ ಸ್ಫೋಟಗೊಂಡಿದೆ. ಫೋನ್ ಸ್ಫೋಟಗೊಂಡ ಪರಿಣಾಮ ಆಕೆಯ ಮುಖ ಹಾಗೂ ಕಾಲುಗಳು ಸುಟ್ಟು ಹೋಗಿದೆ . ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಮಾ ಮೃತಪಟ್ಟಿದ್ದಾಳೆ.
ನೋಕಿಯಾ 5233 ತುಂಬಾ ಹಳೆಯ ಫೋನ್ ಆಗಿದ್ದು, ಪ್ರಚಲಿತದಲ್ಲಿ ನೋಕಿಯಾ ಕಂಪೆನಿ ಯಾವುದೇ ಫೋನ್ ತಯಾರಿಸುತ್ತಿಲ್ಲ. ಫಿನ್ಲೆಂಡ್ ಎಚ್ಎಂಡಿ ಗ್ಲೋಬಲ್ ಕಂಪನಿಯೂ 2017ರ ನಂತರ ನೋಕಿಯಾ ಹೆಸರಿನಲ್ಲಿ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಆದರೆ ಇದು ನಾವು ತಯಾರಿಸಿದ ಫೋನ್ ಅಲ್ಲ ಎಂದು ಎಚ್ಎಂಡಿ ಗ್ಲೋಬಲ್ ಕಂಪೆನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಚಾರ್ಜಿಂಗ್ ಹಾಕಿದ್ದಾಗ ಫೋನಿನಲ್ಲಿ ಮಾತನಾಡುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.