ಮಂಗಳೂರು, ಮೇ 23 (Daijiworld News/MSP):ಲಾಕ್ ಡೌನ್ 4.0 ಹಿನ್ನಲೆಯಲ್ಲಿ ರಾಜ್ಯದ್ಯಾಂತ ಭಾನುವಾರ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ಬಗ್ಗೆ ಶಾಸಕ ಯು.ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ, ಇದೊಂದು ಬೇಕಾಬಿಟ್ಟಿ ಲಾಕ್ ಡೌನ್ ಎಂದು ಲೇವಡಿ ಮಾಡಿದ್ದಾರೆ.
ಸರಣಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು, " ನಿನ್ನೆ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ವಿಜಯ್ ಭಾಸ್ಕರ್ ಅವರ ಜೊತೆ ಲಾಕ್ ಡೌನ್ ವಿಚಾರವಾಗಿ ಮಾತನಾಡುತ್ತಿದ್ದೆ .ಸಂಡೇ ಲಾಕ್ ಡೌನ್ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ದಿನಸಿ ಅಂಗಡಿ ಓಪನ್, ಮಾರುಕಟ್ಟೆ ಓಪನ್, ಹಾಲು ತರಕಾರಿ ಓಪನ್, ಎಲ್ಲಾ ಓಪನ್ ಮಾಡಿ ಜನರನ್ನ ಮಾತ್ರ ಓಡಾಡ ಬೇಡಿ ಅಂದ್ರೆ ಹೇಗೆ.?? ಒಂದೆಡೆ ಕರ್ಫ್ಯೂ ಇದೆ ಹೊರಬರಬೇಡಿ ಅಂತಾ ಹೇಳ್ತಾ ಇರೋ ಪೋಲಿಸರು ಸೆಕ್ಷನ್ 144 ಕೂಡ ಜಾರಿಯಲ್ಲಿದೆ ಅಂತಾರೆ. ಹೀಗಾಗಿ ಸಂಡೇ ಲಾಕ್ ಡೌನ್ ನ ವೈಜ್ಙಾನಿಕತೆಯೇ ಅರ್ಥವಾಗ್ತಾ ಇಲ್ಲ.
ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದೊಂದು ಬೇಕಾಬಿಟ್ಟಿ ಲಾಕ್ ಡೌನ್ . ಎನಿವೇ ಈ ಯು ಟರ್ನ್ ಸರ್ಕಾರ ತಜ್ಙರ ಜೊತೆ ಕುಳಿತು ತೀರ್ಮಾನಿಸೋದು ಒಳಿತು ಎಂದು ಹೇಳಿದ್ದಾರೆ,