ಮಂಗಳೂರು, ಮಾ 21: ಹೋಬಳಿ ಮಟ್ಟದ ಇಂದಿರಾ ಕ್ಯಾಂಟಿನ್ ತೊಕ್ಕೊಟ್ಟುವಿನಲ್ಲಿ ನಾಳೆ ಕಾರ್ಯಾರಂಭ ಮಾಡಲಿದೆ ಎಂದು ಆಹಾರ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ಮಾ 21 ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ತೊಕ್ಕೊಟ್ಟುವಿನ ಇಂದಿರಾ ಕ್ಯಾಂಟಿನ್ ನಾಳೆ ಸಂಜೆ ಉದ್ಘಾಟನೆಗೊಳ್ಳಲಿದ್ದು ಇದಕ್ಕೆ ಕೂಲಿ ಕಾರ್ಮಿಕರೇ ಚಾಲನೆ ನೀಡಲಿದ್ದಾರೆ ಎಂದರು .
ಮಂಗಳೂರು ಕ್ಯಾಂಟೀನ್ ನಲ್ಲಿ ಸ್ಥಳೀಯ ಆಹಾರ ನೀಡಲು ಚಿಂತನೆ ನಡೆಸಲಾಗಿದ್ದು, ಮಧ್ಯಾಹ್ನ ಕುಚ್ಚಲಕ್ಕಿ ಅನ್ನ ಹಾಗೂ ಜಿಲ್ಲೆಯಲ್ಲಿರುವ ಆಹಾರ ಪದ್ದತಿಯಂತೆ ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಇನ್ನು ಜಿಲ್ಲೆಯ ಇಂದಿರಾ ಕ್ಯಾಂಟಿನ್ ನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆ 7 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಕ್ಯಾಂಟಿನ್ ಕಾರ್ಯಾಚರಿಸಲಿದೆ ಎಂದು ಇದೇ ವೇಳೆ ನುಡಿದರು.