ಉಳ್ಳಾಲ, ಮೇ 23 (DaijiworldNews/SM): ಮಂಗಳೂರಿನ ದೇರಳಕಟ್ಟೆಯಲ್ಲಿರುವ ನಿಟ್ಟೆ ವಿಶ್ವವಿದ್ಯಾನಿಲಯದ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಪ್ರಯೋಗಾಲಯವು ಗಂಟಲು ಮತ್ತು ಮೂಗಿನ ದ್ರವದಿಂದ ಕೋವಿಡ್-19 ಸೋಂಕು ವೈರಸ್ ಪರೀಕ್ಷೆ ಸೌಲಭ್ಯ ಹೊಂದಿದ್ದು, ಈ ಸೌಲಭ್ಯಕ್ಕೆ ಎನ್.ಎ.ಬಿ.ಎಲ್. ಮಾನ್ಯತೆ ಹಾಗೂ ಐ.ಸಿ.ಎಮ್.ಆರ್. ನ ಅನುಮೋದನೆ ಪಡೆದಿದೆ.
ಪ್ರಯೋಗಾಲಯದ ಸಿಬ್ಬಂದಿಗಳು ಬೆಂಗಳೂರಿನ ರಾಜ್ಯ ಮಾರ್ಗದರ್ಶಿ ಸಂಸ್ಥೆಯಾದ ನಿಮ್ಹಾನ್ಸ್ ನಲ್ಲಿ ವಿಶೇಷ ತರಬೇತಿ ಪಡೆದಿದ್ದು, ಮೈಕ್ರೋಬಯೋಲಾಜಿ ವಿಭಾಗದ ಪ್ರಾಧ್ಯಾಪಕ ಡಾ| ಅಮಿತ್ ಕೆಲ್ಲಿಯವರನ್ನು ಈ ಪರೀಕ್ಷಾ ಸೌಲಭ್ಯದ ನೋಡಲ್ ಅಧಿಕಾರಿಯಾಗಿ ನೇಮಿಸಿರುವುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಪ್ರಯೋಗಾಲಯದ ನುರಿತ ತಜ್ಞರು ಸಾರ್ಸ್ ಕೋವಿಡ್-19 ಆರ್ಎನ್ಎ ಗುಣಾತ್ಮಕ ಪರೀಕ್ಷೆಯನ್ನು ರಿಯಲ್ಟೈಮ್ ಆರ್ಟಿಪಿಸಿಆರ್ ವಿಧಾನದಿಂದ ನಡೆಸಿ ಅದೇ ದಿನದಂದು ವರದಿಯನ್ನು ನೀಡುತ್ತಾರೆ.