ಉಡುಪಿ, ಮೇ 24 (Daijiworld News/MB) : ಉಡುಪಿಯಲ್ಲಿ ಮಧ್ಯಾಹ್ನದಿಂದ ಸಂಜೆ ವೇಳೆಗೆ ಮತ್ತೆ ಐವರಿಗೆ ಸೋಂಕು ಇರುವುದು ದೃಢಪಟ್ಟಿದ್ದು ಜಿಲ್ಲೆಯಲ್ಲಿಂದು ಒಟ್ಟು 23 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಸಂಜೆ ಸೋಂಕು ದೃಢಪಟ್ಟ ಐವರ ಪೈಕಿ ಓರ್ವರು ದುಬೈಯಿಂದ, ಒಬ್ಬರು ತೆಲಾಂಗಣದಿಂದ ಹಾಗೂ ಉಳಿದ ಮೂವರು ಮಹಾರಾಷ್ಟ್ರದಿಂದ ಆಗಮಿಸಿದ್ದರು.
ಶನಿವಾರ ಸಂಜೆ 5 ರಿಂದ ಭಾನುವಾರ ಮಧ್ಯಾಹ್ನ 12 ರವರೆಗೂ ಉಡುಪಿ ಜಿಲ್ಲೆಯಲ್ಲಿ ಮೂವರು ಪೊಲೀಸರು ಹಾಗೂ ಒರ್ವ ತುಂಬು ಗರ್ಭಿಣಿಯನ್ನು ಸೇರಿ 18 ಮಂದಿಯಲ್ಲಿ ಕೊರೊನಾ ದೃಢಪಟ್ಟಿತ್ತು. ಇದೀಗ ಸಂಜೆ 5 ರ ವೇಳೆಗೆ ಮತ್ತೆ ಐವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ಜಿಲ್ಲೆಯಲ್ಲಿ ಶನಿವಾರದವರೆಗೆ 53 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ. ಒಬ್ಬರು ಕೊರೊನಾದಿಂದಾಗಿ ಸಾವನ್ನಪ್ಪಿದ್ದು ಮೂವರು ಗುಣಮುಖರಾಗಿದ್ದಾರೆ.